ರಾಷ್ಟ್ರೀಯ

ಸುಷ್ಮಾ ಆರೋಗ್ಯದಲ್ಲಿ ಚೇತರಿಕೆ; ಶೀಘ್ರದಲ್ಲೇ ಆಸ್ಪತ್ರೆಯಿಂದ ಮನೆಗೆ: ಎ ಐ ಐ ಎಂ ಎಸ್

Pinterest LinkedIn Tumblr

Sushma-Swaraj2ನವದೆಹಲಿ: ಎದೆ ನೋವು ಮತ್ತು ಆರ್ಥರೈಟಿಸ್ ತೊಂದರೆಗಳಿಂದ ದೆಹಲಿಯ ಎ ಐ ಐ ಎಂ ಎಸ್ ಆಸ್ಪತ್ರೆಗೆ ದಾಖಲಾಗಿದ್ದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಶೀಘ್ರದಲ್ಲೇ ಆಸ್ಪತ್ರೆಯಿಂದ ಮನೆಗೆ ತೆರಳಲಿದ್ದಾರೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.
“ಸುಷ್ಮಾ ಸ್ವರಾಜ್ ಅವರ ಆರೋಗ್ಯ ನಿರಂತರವಾಗಿ ಚೇತರಿಸಿಕೊಳ್ಳುತ್ತಿದೆ. ಆತಂಕ ಪಡುವ ಅಗತ್ಯ ಇಲ್ಲ. ಅವರನ್ನು ಶೀಘ್ರದಲ್ಲೇ ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗುವುದು ಆದರೆ ನಿಖರವಾದ ದಿನ ಹೇಳಲು ಸಾಧ್ಯವಿಲ್ಲ” ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವಕ್ತಾರ ಅಮಿತ್ ಗುಪ್ತಾ ತಿಳಿಸಿದ್ದಾರೆ.
ಚಿಕಿತ್ಸೆ ವೇಳೆಯಲ್ಲಿ ಬೇರೆ ತೊಂದರೆಗಳಿಗೆ ಸುಷ್ಮಾ ಒಳಗಾಗಿದ್ದಾರೆಯೇ ಎಂಬ ಪ್ರಶ್ನೆಗೆ “ಗಂಭೀರವಾದದ್ದೇನಿಲ್ಲ. ಅವರು ಮೊದಲಿನಿಂದ ಹೃದ್ರೋಗ ಚಿಕಿತ್ಸೆ ಪಡೆಯುತ್ತಿದ್ದರು ಆದುದರಿಂದ ಅವರ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿದೆ. ಆದರೆ ಈಗ ಸ್ಥಿರವಾಗಿದ್ದಾರೆ” ಎಂದು ಕೂಡ ಗುಪ್ತಾ ಹೇಳಿದ್ದಾರೆ.
ಕಳೆದ ವಾರ ಎದೆ ನೋವು ಮತ್ತು ಆರ್ಥರೈಟಿಸ್ ತೊಂದರೆಗಳಿಂದ ದೆಹಲಿಯ ಎ ಐ ಐ ಎಂ ಎಸ್ ಆಸ್ಪತ್ರೆಗೆ ದಾಖಲಾಗಿದ್ದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಮಧ್ಯಪ್ರದೇಶ ಶಿವರಾಜ್ ಸಿಂಗ್ ಚೌಹಾನ್ ಮತ್ತಿತರು ಭೇಟಿ ಮಾಡಿ ಆರೋಗ್ಯದ ಬಗ್ಗೆ ವಿಚಾರಿಸಿದ್ದರು.

Write A Comment