ರಾಷ್ಟ್ರೀಯ

ಕಲಾಪ ಪದೇ ಪದೇ ಮುಂದೂಡಿಕೆ

Pinterest LinkedIn Tumblr

B22C6B33-4B7A-49CE-974A-55EC3F7387BD

ನವದೆಹಲಿ (ಪಿಟಿಐ): ಬಹುಕೋಟಿ ವಿವಿಐಪಿ ಕಾಫ್ಟರ್‌ ಖರೀದಿ ಪ್ರಕರಣ ರಾಜ್ಯಸಭೆಯಲ್ಲಿ ಮಾರ್ಧನಿಸಿದರಿಂದ ಸೋಮವಾರ ಕಲಾಪವನ್ನು ಪದೇ ಪದೇ ಮುಂದೂಡಲಾಯಿತು.

ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್‌ ಸಂಸದರು ಗುಜರಾತ್‌ ಪೆಟ್ರೋಲಿಯಂ ಕಾರ್ಪೊರೇಶನ್‌ನಲ್ಲಿ ಭ್ರಷ್ಟಚಾರ ನಡೆದಿದೆ ಎಂದು ಆರೋಪಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಇದಕ್ಕೆ ಪ್ರತಿಯಾಗಿ ಬಿಜೆಪಿ ಮತ್ತು ಮಿತ್ರ ಪಕ್ಷಗಳು ಹೆಲಿಕಾಫ್ಟರ್‌ ಪ್ರಕರಣವನ್ನು ಪ್ರಸ್ತಾಪಿಸಿದರು. ಇದರಿಂದ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಮಾತಿನ ಚಕಮಕಿ ನಡೆದು ಕಲಾಪವನ್ನು ಮುಂದೂಡಲಾಯಿತು.

ಪದೇ ಪದೇ ಗದ್ದಲದ ವಾತಾವರಣ ನಿರ್ಮಾಣವಾದ್ದರಿಂದ ಕಲಾಪವನ್ನು ನಾಳೆಗೆ ಮುಂದೂಡಲಾಯಿತು.

Write A Comment