ರಾಷ್ಟ್ರೀಯ

ಲಾಲು ಕಾಲಿಗೆ ಬಿದ್ದ ಆಜಾದಿ ಕನ್ಹಯ್ಯ : ಟ್ವಿಟರ್‌ನಲ್ಲಿ ಕೋಪಾವೇಶ!

Pinterest LinkedIn Tumblr

Kanhaiya-Lalu-700ಪಟ್ನಾ : ಜೆಎನ್‌ಯು ವಿದ್ಯಾರ್ಥಿ ಸಂಘದ ನಾಯಕ ಕನ್ಹಯ್ಯ ಕುಮಾರ್‌ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌ ಅವರ ಕಾಲಿಗೆ ಬೀಳುತ್ತಿರುವ ಫೋಟೋ ಒಂದು ಟ್ವಿಟರ್‌ನಲ್ಲಿ ವೈರಲ್‌ ಆಗಿ ಹರಿದಾಡುತ್ತಿದ್ದು ಸಾಮಾಜಿಕ ಜಾಲ ತಾಣದಲ್ಲಿದು ಅತ್ಯಂತ ಹಸಿ-ಬಿಸಿ ಸುದ್ದಿ, ವಾದ – ವಿವಾದಗಳಿಗೆ ಕಾರಣವಾಗಿದೆ.

Kanhaiya Kumar striking at the root of Corruption in India. pic.twitter.com/D0cGOAr7Gj

— Sumit (@_RKSumit) April 30, 2016
ಟ್ವಿಟರ್‌ನಲ್ಲಿ ಈ ಫೋಟೋ ಕಾಣಿಸಿಕೊಂಡಾಕ್ಷಣವೇ ಹಲವರು ಹಲವು ಬಗೆಯಲ್ಲಿ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ಕೆಲವು ಸ್ಯಾಂಪಲ್‌ಗ‌ಳು ಹೀಗಿವೆ :

* ಕನ್ಹಯ್ಯ ಕುಮಾರ್‌ ಭಾರತದಲ್ಲಿನ ಭ್ರಷ್ಟಾಚಾರದ ಮೂಲಕ್ಕೆ ಕೈ ಹಾಕಿದ್ದಾರೆ !

* ಲಾಲುಜೀ ಅವರ ಪಾದಸ್ಪರ್ಶದ ಮೂಲಕ ಜೆಎನ್‌ಯು ಭ್ರಷ್ಟಾಚಾರ ಶುದ್ಧೀಕರಣಕ್ಕೆ ತೊಡಗಿದೆ; ಹಿಮ್ಮೇಳ ದಲ್ಲಿ ಕೇಳಿಸುತ್ತಿದೆ : ಆಜಾದಿ, ಆಜಾದಿ, ಆಜಾದಿ !

* ಕನ್ಹಯ್ಯ ಲಾಲು ಪಾದದಡಿ ಆಜಾದಿಯನ್ನು ಅರಸುತ್ತಿದ್ದಾರೆ !

*ಗ್ರೇಟ್‌ ಕನ್ಹಯ್ಯ ಕುಮಾರ್‌ ಭ್ರಷ್ಟ ರಾಜಕಾರಣಿ ಲಾಲು ಕಾಲಿಗೆ ಬಿದ್ದಿದ್ದಾರೆ – ನಿಮಗೆ ನಾಚಿಕೆಯಾಗಬೇಕು – ನಿಮ್ಮನ್ನು ನೀವು ಅಂಬೇಡ್ಕರ್‌ವಾದಿ ಎಂದು ಹೇಗೆ ಕರೆದುಕೊಳ್ಳುವಿರಿ ?

* ಸಾಮಾಜಿಕ ನ್ಯಾಯದ ಎಡಗಾಲು ಸ್ಪರ್ಶಿಸಿದ ಕನ್ಹಯ್ಯಗೆ ಲಾಲು ಆಶೀರ್ವಾದ !

* ಕನ್ಹಯ್ಯ ಲಾಲುಗೆ ಶರಣಾಗಿದ್ದಾರೆ – ಆಜಾದಿ ಗ್ಯಾಂಗ್‌ ಅನಾವರಣಗೊಂಡಿದೆ !
-ಉದಯವಾಣಿ

Write A Comment