ರಾಷ್ಟ್ರೀಯ

ಚೀನಾದಲ್ಲಿ “ರೊಬೊಟ್‌’ ಬೌದ್ಧ ಧರ್ಮ ಪ್ರಚಾರಕ

Pinterest LinkedIn Tumblr

feature-image-monk-robotಬೌದ್ಧಧರ್ಮ ಪ್ರಾಚೀನ ಧರ್ಮ. ಹಾಗಂತ ಈ ಧರ್ಮದ ಬಗ್ಗೆ, ಮಹತ್ವ, ಪ್ರಚಾರದ ಬಗ್ಗೆ ಇನ್ನು ಧರ್ಮದ
ಅನುಯಾಯಿಗಳು ಚಿಂತಿಸಬೇಕೆಂದಿಲ್ಲ ಈ ಬಗ್ಗೆ ಚೀನಾದಲ್ಲಿ ಒಂದು ರೊಬೊಟ್‌ ಸೃಷ್ಟಿಯಾಗಿದೆ.

ಕ್ಸೆ„ನರ್‌ ಹೆಸರಿನ ರೊಬೊಟ್‌ ಬೌದ್ಧ ಧರ್ಮದ ಮಂತ್ರಗಳನ್ನು, ಧರ್ಮದ ಬಗ್ಗೆ, ಅದರ ಮಹತ್ವದ ಬಗ್ಗೆ ಪಟ
ಪಟನೆ ಉತ್ತರ ಕೊಡುತ್ತದೆ. ಮಂತ್ರಗಳನ್ನು ನಿರಂತರವಾಗಿ ಹೇಳುವ ಸಾಮರ್ಥ್ಯವನ್ನೂ ಇದು ಹೊಂದಿದೆ. ಇದಕ್ಕಾಗಿ
ಥೇಟ್‌ ಆ್ಯಪಲ್‌ನ ಸಿರಿ ಸಾಫ್ಟವೇರ್‌ನಂತೆ ಇದರ ಪ್ರೋಗ್ರಾಮ್‌ ರೂಪಿಸಲಾಗಿದೆ. ಹೆಚ್ಚು ಅವಧಿಯ ಮಂತ್ರ ಕೇಳಲು ಸುಧಾರಿತ ಬ್ಯಾಟರಿ ಬ್ಯಾಕ್‌ಅಪ್‌ ಕೂಡ ಇದರಲ್ಲಿದೆ. ಚೀನಾದ, 500 ವರ್ಷಗಳ ಇತಿಹಾಸ ಹೊಂದಿದ ಲಾಂಗ್‌ಕ್ವಾನ್‌ ಹೆಸರಿನ ದೇಗುಲದ ಮಂದಿ ಇದರ ಆವಿಷ್ಕಾರ ಮಾಡಿದ್ದು ಕುತೂಲ ಮೂಡಿಸಿದೆ. ಮುಂದಿನ ದಿನಗಳಲ್ಲಿ ಬೌದ್ಧ ಧರ್ಮ ಹೆಚ್ಚು ಪ್ರಚಾರಕ್ಕೆ ಬರಲಿದ್ದು, ಆಧುನಿಕ ಜಗತ್ತಿನ ಈ ಸಂದರ್ಭ ಈ ರೊಬೊಟ್‌ ಸನ್ಯಾಸಿ ಹೆಚ್ಚಿನ ಪ್ರಭಾವ ಬೀರಲಿದೆ ಎಂದು ಇಲ್ಲಿನವರು ಹೇಳಿದ್ದಾರೆ. ಇದು ಜಗತ್ತಿನ ಮೊದಲ ರೊಬೊಟ್‌ ಸನ್ಯಾಸಿಯೂ ಆಗಿದೆ. ಇದರ ಎದುರು ಭಾಗ ಒಂದು ಟ್ಯಾಬ್ಲೆಟ್‌ ಇದ್ದು ಅದರಲ್ಲಿ ಬೌದ್ಧ ಧರ್ಮದ ಬಗ್ಗೆ ಸುಮಾರು 20 ಪ್ರಶ್ನೆಗಳನ್ನು ಕೊಡಲಾಗಿದೆ. ಇದರಲ್ಲಿ ಪ್ರಶ್ನೆ ಮೇಲೆ ಬೆರಳು ಸ್ಪರ್ಶಿಸಿದಲ್ಲಿ, ರೊಬೊಟ್‌ ಉತ್ತರ ಕೊಡುತ್ತದೆ. ಜೊತೆಗೆ ಲಾಂಗ್‌ಕ್ವಾನ್‌ ದೇಗುಲದ ಕುರಿತ ಮಾಹಿತಿಗಳನ್ನೂ ಇದು ಹೇಳುತ್ತದೆ.
-ಉದಯವಾಣಿ

Write A Comment