
ಭಾರತದ ಅಭಿಮಾನಿಗಳ ಪೈಕಿ ದಕ್ಷಿಣ ಅಫ್ರಿಕಾದ ಖ್ಯಾತ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ ಕೂಡ ಒಬ್ಬರು. ಅವರು ಇಲ್ಲಿನ ಸಂಸ್ಕೃತಿಗೆ ಮಾರು ಹೋಗಿ, ತಮ್ಮ ಮಗಳಿಗೆ ‘ಇಂಡಿಯಾ’ ಎಂಬ ಹೆಸರನ್ನಿಟ್ಟಿದ್ದರು.




ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಫೀಲ್ಡಿಂಗ್ ಕೋಚ್ ಆಗಿರುವ ಜಾಂಟಿ ರೋಡ್ಸ್ ಈ ಹಿನ್ನೆಲೆಯಲ್ಲಿಯೇ ಕುಟುಂಬ ಸಮೇತ ಭಾರತದಲ್ಲಿದ್ದಾರೆ. ಮುಂಬೈನ ಸಾಂತಾಕ್ರೂಜ್ ನಲ್ಲಿರುವ ಪೇಜಾವರ ಮಠಕ್ಕೆ ಕುಟುಂಬದೊಂದಿಗೆ ಭೇಟಿ ನೀಡಿದ ಜಾಂಟಿ ರೋಡ್ಸ್, ಮಗಳು ‘ಇಂಡಿಯಾ ಜೇನ್ ರೋಡ್ಸ್’ ಒಳಿತು ಕೋರಿ ಪೂಜೆ ಮಾಡಿಸಿದ್ದಾರೆ.
ಪಕ್ಕಾ ಭಾರತೀಯ ಶೈಲಿಯಲ್ಲಿ ಪಂಚೆ ತೊಟ್ಟು ಶಲ್ಯ ಹೊದ್ದಿದ್ದ ಜಾಂಟಿ ರೋಡ್ಸ್, ಪುರೋಹಿತರು ಹೇಳಿದಂತೆ ಪೂಜಾ ಕಾರ್ಯವನ್ನು ನೆರವೇರಿಸಿದ್ದಾರೆ. ಭಾರತದಲ್ಲಿನ ವಿವಿಧ ಸಂಸ್ಕೃತಿ, ನಡೆ-ನುಡಿ, ಏಕತೆ, ಸಂಪ್ರದಾಯದ ಬಗ್ಗೆ ಅಪಾರ ಅಭಿಮಾನ ಹೊಂದಿರುವ ಜಾಂಟಿ ರೋಡ್ಸ್ ಬಗ್ಗೆ ಇಲ್ಲಿನ ಜನರಿಗೂ ಒಳ್ಳೆಯ ಅಭಿಮಾನವಿದೆ.