ಅಂತರಾಷ್ಟ್ರೀಯ

ಅಮೆರಿಕ ಅಧ್ಯಕ್ಷರ ಕೊನೆಯ ಔತಣಕೂಟದಲ್ಲಿ ಪ್ರಿಯಾಂಕಾ ಭಾಗಿ…ಬರಾಕ್ ಒಬಾಮ ಹೇಳಿದ್ದೇನು…?

Pinterest LinkedIn Tumblr

1-priyanka-chopra-barack-obama-white-house

ವಾಷಿಂಗ್ಟನ್: ಅಮೆರಿಕದ ಶ್ವೇತಭವನದಲ್ಲಿ ಹಮ್ಮಿಕೊಂಡಿದ್ದ ಅಧ್ಯಕ್ಷ ಬರಾಕ್ ಒಬಾಮರ ಕೊನೆಯ ಔತಣಕೂಟದಲ್ಲಿ ಬಾಲಿವುಡ್ ನ ಬೆಡಗಿ ಪ್ರಿಯಾಂಕ ಚೋಪ್ರಾ ಪಾಲ್ಗೊಂಡಿದ್ದರು.

ಈ ಔತಣಕೂಟ ನಗೆಗಡಲಾಗಿ ಮಾರ್ಪಟ್ಟಿತ್ತು. ಡೊನಾಲ್ಡ್ ಟ್ರಂಪ್ ಅವರನ್ನು ಗುರಿಯಾಗಿಸಿಕೊಂಡು ಹಾಸ್ಯ ಮಾಡಿದ ಒಬಾಮಾ, ಉಳಿದವರ ಕಾಲೆಳೆದು ಖುಷಿಪಟ್ಟರು. ರಿಪೋರ್ಟರ್ , ಸೆಲೆಬ್ರಿಟಿಗಳು ಇಂದು ತುಂಬಿಕೊಂಡಿದ್ದರು, ಟ್ರಂಪ್ ಆಗಮಿಸಲು ಯಾಕೆ ಒಪ್ಪಲಿಲ್ಲ. ಇಲ್ಲಿಯ ಊಟ ಚೆನ್ನಾಗಿಲ್ಲವೇ ಅಥವಾ ಮನೆಯ ಊಟವನ್ನೇ ಸೇವಿಸುತ್ತಾರೆಯೇ ಎಂದು ಹಾಸ್ಯಮಾಡಿದ್ದಾರೆ.

ತಮ್ಮ ಬಗ್ಗೆಯೂ ವ್ಯಂಗ್ಯವಾಡಿದರು. ನನ್ನ ಅಧ್ಯಕ್ಷೀಯ ಅವಧಿ ಕೊನೆಗೊಳ್ಳುತ್ತಿರುವ ಬಗ್ಗೆ ಮಾತನಾಡಿದ ಅವರು, ಸಾವಿಗಾಗಿ ಕೊನೆ ದಿನಗಳನ್ನು ಎಣಿಸುತ್ತಿದ್ದೇನೆ. ಕೆಲ ವಿದೇಶಿ ನಾಯಕುರ ಕೂಡಾ ಅದನ್ನೇ ಎದುರು ನೋಡುತ್ತಿದ್ದಾರೆ. ಕಳೆದ ವಾರ ಪ್ರಿನ್ಸ್ ಜಾರ್ಜ್ ಸ್ನಾನದ ಬಟ್ಟೆಯಲ್ಲೇ ನನ್ನನ್ನು ಭೇಟಿಯಾಗಿದ್ದರು ಎಂದು ವ್ಯಂಗ್ಯಮಾಡಿದರು.

ಇನ್ನು ಅಮೆರಿಕ ಟೀವಿ ಜಗತ್ತಿನಲ್ಲಿ ಹೆಸರು ಮಾಡುತ್ತಿರುವ ಪ್ರಿಯಾಂಕ ಚೋಪ್ರಾ ಶ್ವೇತಭವನದಲ್ಲಿ ಆಯೋಜಿಸಲಾಗಿದ್ದ ಔತಣಕೂಟದಲ್ಲಿ ಭಾಗವಹಿಸಿದ್ದರ ಬಗ್ಗೆ ಟ್ವಿಟರ್ ನಲ್ಲಿ ಸಂತಸ ಹಂಚಿಕೊಂಡಿದ್ದಾರೆ.

ಬರಾಕ್ ಒಬಾಮ ಅವರು ತಮಾಷೆಯಾಗಿ ಮಾತನಾಡುವ ಹಾಗೂ ಆಕರ್ಷಕ ವ್ಯಕ್ತಿ ಮತ್ತು ಅವರ ಪತ್ನಿ ಅಮೆರಿಕ ಪ್ರಥಮ ಮಹಿಳೆ ಮಿಶೆಲ್ ಅವರನ್ನು ಭೇಟಿಯಾಗಿದ್ದು ಬಹಳ ಸಂತಸ ತಂದಿದೆ. ಇದಕ್ಕೆ ನನ್ನ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.

ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯ ಪ್ರಕಾರ ಶ್ವೇತ ಭವನದ ಮಾಧ್ಯಮ ವಕ್ತಾರರ ಔತಣಕೂಟವನ್ನು ಪಾರಂಪಾರಿಕವಾಗಿ ಮಾಧ್ಯಮ ಬಂಧುಗಳು, ಟಿವಿ ವಾಹಿನಿಗಳು, ಇತರ ಮನರಂಜನಾ ಮಾಧ್ಯಮಗಳಿಗಾಗಿ ಆಯೋಜಿಸಲಾಗುತ್ತದೆ.

Write A Comment