ಕನ್ನಡ ವಾರ್ತೆಗಳು

ವಕ್ವಾಡಿ: ಕಾರ್ಯಕ್ರಮಕ್ಕೆ ಮೆರುಗು ತುಂಬಿದ ಶ್ರುತಿ, ಸುಧಾರಾಣಿ, ಭವ್ಯಾ, ಹರಿಪ್ರಿಯಾ

Pinterest LinkedIn Tumblr

ಕುಂದಾಪುರ: ಕುಂದಾಪುರ ತಾಲೂಕಿನ ವಕ್ವಾಡಿಯ ಉದ್ಯಮಿ ಹಾಗೂ ಡಾ. ರಾಜಕುಮಾರ್ ಕುಟುಂಬದ ಜೊತೆಗೆ ನಿಕಟವರ್ತಿಯಾಗಿರುವ  ವಿ.ಕೆ. ಮೋಹನ್ ಅವರ ಸಹೋದರಿ ರೂಪಾ ಹಾಗೂ ಭಾವ ವಿ.ಕೆ. ಹರೀಶ್ ದಂಪತಿಗಳ ಮನೆಯಾದ ‘ಸ್ಪೂರ್ತಿ’ ಇದರ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ಡಾ. ಮಹರ್ಷಿ ಆನಂದ ಗುರೂಜಿ ಭಾಗವಹಿಸಿದ್ರೇ ಕನ್ನಡ ಚಲನಚಿತ್ರರಂಗದ ತಾರಾಮಣಿಗಳು ಇನ್ನಷ್ಟು ಮೆರಗು ನೀಡಿದ್ರು.

Kundapura_Vakwady Film Actors_V.k. Mohan (7) Kundapura_Vakwady Film Actors_V.k. Mohan (6) Kundapura_Vakwady Film Actors_V.k. Mohan (4) Kundapura_Vakwady Film Actors_V.k. Mohan (3) Kundapura_Vakwady Film Actors_V.k. Mohan (2) Kundapura_Vakwady Film Actors_V.k. Mohan (5) Kundapura_Vakwady Film Actors_V.k. Mohan (10) Kundapura_Vakwady Film Actors_V.k. Mohan (12) Kundapura_Vakwady Film Actors_V.k. Mohan (11) Kundapura_Vakwady Film Actors_V.k. Mohan (9) Kundapura_Vakwady Film Actors_V.k. Mohan (8) Kundapura_Vakwady Film Actors_V.k. Mohan (1) Kundapura_Vakwady Film Actors_V.k. Mohan (13) Kundapura_Vakwady Film Actors_V.k. Mohan (14) Kundapura_Vakwady Film Actors_V.k. Mohan (16) Kundapura_Vakwady Film Actors_V.k. Mohan (15) Kundapura_Vakwady Film Actors_V.k. Mohan (17)

ಸಮಾರಂಭಕ್ಕೆ ವಿಶೇಷ ಮೆರಗು ನೀಡಿದ್ದು ಕನ್ನಡ ಚಿತ್ರರಂಗದ ನಟ-ನಟಿಯರು ಹಾಗೂ ಕಲಾವಿದರು. ಚಲನಚಿತ್ರರಂಗದ ಹಿರಿಯ ನಿರ್ದೇಶಕ ಭಗವಾನ್, ಫಿಲ್ಮ್ ಚೆಂಬರ್ ಅಧ್ಯಕ್ಷ ಸಾ.ರಾ. ಗೋವಿಂದ್, ಡಾ.ರಾಜಕುಮಾರ್ ಫ್ಯಾಮಿಲಿಯ ಗೋವಿಂದ್ ರಾಜ್, ವಿನಯ್ ರಾಘವೇಂದ್ರ ರಾಜಕುಮಾರ್, ಬಾಲರಾಜ್, ನಟ ವಿನೋದ್ ಪ್ರಭಾಕರ್, ಪ್ರಖ್ಯಾತ ನಿರೂಪಕ ಅಕುಲ್ ಬಾಲಾಜಿ, ಉದಯ ಕಾಮೆಡಿ ಖ್ಯಾತಿಯ ಹರೀಶ್, ಖ್ಯಾತ ನಟಿಯರಾದ ಸುಧಾರಾಣಿ, ಶ್ರುತಿ, ಭವ್ಯಾ, ಹರಿಪ್ರಿಯಾ, ಜಯಶ್ರೀ ಮೊದಲಾದವರ ಉಪಸ್ಥಿತಿ ಜನರನ್ನು ಇನ್ನಷ್ಟು ಆಕರ್ಷಿಸಿತ್ತು. ಸಂಪೂರ್ಣ ಮನೆಯನ್ನು ವೀಕ್ಷಿಸಿದ ನಟಿಯರು ಮೆಚ್ಚುಗೆ ವ್ಯಕ್ತಪಡಿಸಿದರು.

ಇನ್ನು ವಿ.ಕೆ. ಹರೀಶ್ ದಂಪತಿಗಳ ಈ ನಿವಾಸವು ಅತ್ಯಾಧುನಿಕ ಶೈಲಿಯಲ್ಲಿ ನಿರ್ಮಾಣಗೊಂಡಿದ್ದು ಮಾತ್ರವಲ್ಲದೇ ವಿವಿಧ ವಿಶೇಷತೆಗಳನ್ನು ಹೊಂದಿದ್ದು ಗೃಹಪ್ರವೇಶದಂದು ಸಚಿವ ವಿನಯಕುಮಾರ್ ಸೊರಕೆ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು, ಜನಪ್ರತಿನಿಧಿಗಳು ಸೇರಿದಂತೆ ಸಾವಿರಾರು ಜನರು ಆಗಮಿಸಿ ಮನೆಯನ್ನು ವೀಕ್ಷಿಸಿ ಶುಭಕೋರಿದರು.

Write A Comment