ರಾಷ್ಟ್ರೀಯ

ಮೇ 4ಕ್ಕೆ ಕಾಪ್ಟರ್ ಡೀಲ್ ವಿವರ

Pinterest LinkedIn Tumblr

parrikkarಪಣಜಿ: ಅಗಸ್ತಾ ವೆಸ್ಟ್ಲ್ಯಾಂಡ್ ಹಗರಣದ ಬಗ್ಗೆ ವಿಸõತ ವರದಿಯನ್ನು ಮೇ 4ರಂದು ಸಂಸತ್ನಲ್ಲಿ ಮಂಡನೆ ಮಾಡುವುದಾಗಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ. ಡೀಲ್ಗೆ ಸಂಬಂಧಿಸಿ ಕಾಲಾನುಕ್ರಮವಾದ ವಿಸõತ ದಾಖಲೆಗಳನ್ನು ಸಂಸತ್ತಿನಲ್ಲಿ ಮಂಡಿಸಲಾಗುವುದು. ಇದರಿಂದ ಅಗಸ್ತಾ ವೆಸ್ಟ್ಲ್ಯಾಂಡ್ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳುವ ಸಲುವಾಗಿ ಹೇಗೆ ಕೆಲ ಅಗತ್ಯ ವಿಧಿ ಮತ್ತು ನಿಬಂಧನೆಗಳಲ್ಲಿ ಬದಲಾವಣೆ ಮಾಡಲಾಯಿತು ಎಂಬುದು ಬಹಿರಂಗವಾಗಲಿದೆ ಎಂದು ಅವರು ಹೇಳಿದ್ದಾರೆ.

ಹಗರಣದಲ್ಲಿ ಭಾಗಿಯಾಗಿರುವವರು ಅವರ ತಪ್ಪನ್ನು ಸಾಬೀತುಪಡಿಸಲು ಯಾವುದೇ ಸಾಕ್ಷ್ಯಳನ್ನು ಬಿಟ್ಟಿಲ್ಲ. ಆದರೆ ಅವರ ತಪ್ಪನ್ನು ಬಹಿರಂಗಪಡಿಸುವುದು ಅಗತ್ಯವಾಗಿದೆ. ಆದರೆ ಈ ವಿಚಾರ ಸಂಸತ್ತಿನಲ್ಲಿ ಮಂಡನೆಯಾಗುವವರೆಗೂ ಇದಕ್ಕೆ ಸಂಬಂಧಿಸಿದ ಎಲ್ಲಾ ವಿಚಾರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಪರಿಕ್ಕರ್ ಹೇಳಿದ್ದಾರೆ.

ಹಣ ರವಾನೆಗೆ ಮ್ಯೂಸಿಕ್ ಕಂಪನಿ!

ರಕ್ಷಣಾ ಸಚಿವಾಲಯದ ಅಧಿಕಾರಿಗಳ ಜತೆ ಹೆಲಿಕಾಪ್ಟರ್ ಡೀಲ್ ನಡೆಸಲು ಮ್ಯೂಸಿಕ್ ಕಂಪನಿಯನ್ನು ಬಳಸಲಾಗಿತ್ತು ಎಂಬ ಅಂಶ ಈಗ ಬಹಿರಂಗವಾಗಿದೆ. ಪಂಜಾಬಿ ಮ್ಯೂಸಿಕ್ ಸಿಡಿಗಳನ್ನು ರಫ್ತು ಮಾಡಲು ಮೀಡಿಯಾ ಎಕ್ಸಿಮ್ ಸಂಸ್ಥೆಯನ್ನು ಅಗಸ್ತಾ ವೆಸ್ಟ್ಲ್ಯಾಂಡ್ನ ಮಧ್ಯವರ್ತಿ ಕ್ರಿಶ್ಚಿಯನ್ ಮೈಕಲ್ ಆರಂಭಿಸಿದ್ದ. ಇದಕ್ಕೆ ಮೈಕಲ್ ಒಡೆತನದ ದುಬೈ ಮೂಲದ ಕಂಪನಿಯಿಂದ ಭಾರಿ ಪ್ರಮಾಣದ ಹಣ ರವಾನೆಯಾಗುತ್ತಿತ್ತು ಎಂಬುದು ಜಾರಿ ನಿರ್ದೇಶನಾಲಯ ನಡೆಸುತ್ತಿರುವ ತನಿಖೆಯಿಂದ ಬಹಿರಂಗವಾಗಿದೆ. ಮ್ಯೂಸಿಕ್ ಸಂಸ್ಥೆಯನು ಅಕ್ರಮ ಹಣ ವರ್ಗಾವಣೆಗೆ ಬಳಸಿಕೊಂಡು ಅದನ್ನು ಸೇನೆ ಮತ್ತು ಇತರ ಅಧಿಕಾರಿಗಳಿಗೆ ಹಂಚಲಾಗಿದೆ ಎಂದು ಜಾರಿ ನಿರ್ದೇಶನಾಲಯ ಅಭಿಪ್ರಾಯಪಟ್ಟಿದೆ.

Write A Comment