ರಾಷ್ಟ್ರೀಯ

ಧರ್ಮಶಾಲಾಗೆ ಆಗಮಿಸಲು ಉಯ್ಘರ್ ನಾಯಕನಿಗೆ ವೀಸಾ

Pinterest LinkedIn Tumblr

chinaನವದೆಹಲಿ: ಚೀನಾ ಅಸಮಾಧಾನದ ಹಿನ್ನೆಲೆಯಲ್ಲಿ ಉಯ್ಘರ್ ಸಮುದಾಯದ ನಾಯಕ ದೋಲ್ಕುನ್ ಇಸಾಗೆ ನೀಡಿದ್ದ ವೀಸಾ ರದ್ದುಗೊಳಿಸಿದ್ದ ಭಾರತ, ಧರ್ಮಶಾಲಾದಲ್ಲಿ ಆಯೋಜಿಸಲ್ಪಟ್ಟಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು 8 ಮಂದಿ ಚೀನಾ ಹೋರಾಟಗಾರರು ಹಾಗೂ ಉಯ್ಘರ್ನ ಪ್ರಮುಖ ನಾಯಕನಿಗೆ ಸದ್ದಿಲ್ಲದಂತೇ ವೀಸಾ ನೀಡಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಮೂರು ದಿನಗಳ ಕಾರ್ಯಕ್ರಮಕ್ಕೆ ಉಯ್ಘರ್ ಅಮೆರಿಕ ಅಸೋಸಿಯೇಷನ್ನ ಇಶತ್ ಹಸನ್ ಸೇರಿ 68 ಮಂದಿ ವಿದೇಶಿ ಪ್ರತಿನಿಧಿಗಳು ಪ್ರವಾಸಿ ವೀಸಾದಲ್ಲಿ ಆಗಮಿಸಿ ಏ.28ರಂದು ಬೌದ್ಧದ ಪರಮೋಚ್ಛ ಧರ್ಮಗುರು ದಲೈಲಾಮಾರನ್ನು ಭೇಟಿಯಾಗಿದ್ದರು ಎಂದು ಭಾರತ ಸರ್ಕಾರ ಸ್ಪಷ್ಟಪಡಿಸಿದೆ.

ಈ ಹಿಂದೆ ಚೀನಾದ ಭಿನ್ನಮತ ನಾಯಕರಾದ ಲು ಜಿಂಗ್ಹುವಾ, ವೊಂಗ್ ಟೊಯಾಂಗ್ ಇ- ವೀಸಾ ಸಲ್ಲಿಸುವ ವೇಳೆ ಸರಿಯಾದ ಪಾಸ್ಪೋರ್ಟ್ನ್ನು ಅಪ್ಲೋಡ್ ಮಾಡದ ಹಿನ್ನೆಲೆಯಲ್ಲಿ ಅವರ ಅರ್ಜಿಯನ್ನು ತಿರಸ್ಕರಿಸಲಾಗಿತ್ತು ಎಂದು ವಲಸೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

Write A Comment