ರಾಷ್ಟ್ರೀಯ

ಭಾರತದ ಲಡಾಕ್ ನಲ್ಲಿ ತಲೆಎತ್ತಲಿದೆ ವಿಶ್ವದ ಅತಿ ದೊಡ್ಡ ಟೆಲಿಸ್ಕೋಪ್

Pinterest LinkedIn Tumblr

Largest-Telescopeನವದೆಹಲಿ: ವಿಜ್ಞಾನ ಕ್ಷೇತ್ರದಲ್ಲಿ ಈಗಾಗಲೇ ತನ್ನ ಅಭೂತಪೂರ್ವ ಸಾಧನೆಗಳಿಂದ ಹೆಜ್ಜೆಗುರುತುಗಳನ್ನು ಉಳಿಸಿರುವ ಭಾರತಕ್ಕೆ ಮತ್ತೊಂದು ಹೆಮ್ಮೆಯ ಗರಿ ಸೇರುತ್ತಿದ್ದು, ಪಂಚರಾಷ್ಟ್ರಗಳ  ಉದ್ದೇಶಿತ ಯೋಜನೆ ವಿಶ್ವದ ಅತೀ ದೊಡ್ಡ ಟೆಲಿಸ್ಕೋಪ್ ನಿರ್ಮಾಣ ಭಾರತದಲ್ಲಿ ಆಗಲಿದೆ.

ಈ ಹಿಂದೆ ನಿಗದಿಯಾಗಿದ್ದು ಹವಾಯಿ ದ್ವೀಪದಲ್ಲಿ ಟೆಲಿಸ್ಕೋಪ್ ನಿರ್ಮಾಣಕ್ಕೆ ಸ್ಥಳೀಯ ನಿವಾಸಿಗಳಿಂದ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಭಾರತದ ಲಡಾಕ್ ರವಾನೆ ಮಾಡಲು  ನಿರ್ಧರಿಸಲಾಗಿದೆ. ಟೆಲಿಸ್ಕೋಪ್ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ವಿಜ್ಞಾನಿಗಳು ಸಾಕಷ್ಟು ವಿಚಾರ ಮತ್ತು ಚರ್ಚೆ ಮಾಡಿದ ಬಳಿಕ ಹವಾಯಿ ದ್ವೀಪದಷ್ಟೇ ಲಡಾಕ್ ಕೂಡ ಟೆಲಿಸ್ಕೋಪ್  ನಿರ್ಮಾಣಕ್ಕೆ ಪ್ರಶಸ್ತವಾದ ಜಾಗ ಎಂದು ಗುರುತಿಸಿದ್ದು, ಶೀಘ್ರದಲ್ಲೇ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ.

ಅಮೆರಿಕ, ಚೀನಾ, ಕೆನಡಾ, ಜಪಾನ್ ಮತ್ತು ಭಾರತ ದೇಶದ ನೆರವಿನೊಂದಿಗೆ ನಿರ್ಮಾಣವಾಗುತ್ತಿರುವ ಈ ಥರ್ಟಿ ಮೀಟರ್ ಟೆಲಿಸ್ಕೋಪ್ (ಟಿಎಂಟಿ) ಅನ್ನು ಲಡಾಕ್ ನ ಹ್ಯಾನ್ಲೆಯಲ್ಲಿ ನಿರ್ಮಾಣ  ಮಾಡುವ ಕುರಿತು ಚರ್ಚೆಗಳು ಆರಂಭವಾಗಿವೆ. ಸುಮಾರು 30 ಮೀಟರ್ ಸುತ್ತಳತೆಯ ಈ ಟೆಲಿಸ್ಕೋಪ್ ನಿರ್ಮಾಣ ಕಾಮಗಾರಿ ಎಲ್ಲವೂ ಅಂದುಕೊಂಡತೆ ಆಗಿದ್ದರೆ 2015ರಲ್ಲೇ ಹವಾಯಿ  ದ್ವೀಪದ  ಮೌನಾ ಕಿಯನಲ್ಲಿ ಆರಂಭಗೊಳ್ಳಬೇಕಿತ್ತು. ಆದರೆ ಅಲ್ಲಿ ಸ್ಥಳೀಯ ಭೂಮಾಲೀಕರಿಂದ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಉದ್ದೇಶಿತ ಯೋಜನೆಯನ್ನು ಈಗ ಭಾರತದಲ್ಲಿ ನಿರ್ಮಿಸುವ  ಬಗ್ಗೆ ಚರ್ಚೆ ಆರಂಭಗೊಂಡಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಯೋಜನೆ ನಿರ್ದೇಶಕ ಬಚಾಮ್ ಈಶ್ವರ್ ರೆಡ್ಡಿ ಅವರು, ಹವಾಯಿಯಲ್ಲಿ ನಿರ್ಮಿಸಬೇಕೆನ್ನುವ ನಮ್ಮ ಈ ಮೊದಲ ಉದ್ದೇಶ ಬದಲಾಗಿದ್ದು, ಅಲ್ಲಿನ ಸುಪ್ರೀಂಕೋರ್ಟ್  ತೀರ್ಪಿನ ಪ್ರಕಾರ ನಿರ್ಮಾಣಕ್ಕೆ ನೀಡಲಾದ ಅನುಮತಿಯನ್ನು ಹಿಂಪಡೆಯಲಾಗಿದೆ. ಹೀಗಾಗಿ ಅಲ್ಲಿನ ಏಜೆನ್ಸಿಗಳು ಕೋರ್ಟ್ ನಿರ್ಧಾರವನ್ನೇ ಅನುಸರಿಸುತ್ತಿವೆ ಎಂದು ಹೇಳಿದ್ದಾರೆ. ಹೀಗಾಗಿ  ಭಾರಿ ಗಾತ್ರದ ಟೆಲಿಸ್ಕೋಪ್ ನಿರ್ಮಾಣಕ್ಕೆ ಬೇರೆಯದೇ ಆದ ಸ್ಥಳಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ. ಆರಂಭದಲ್ಲಿಯೇ ಲಡಾಕ್ನ ಹ್ಯಾನ್ಲೆ ಪ್ರದೇಶವನ್ನು ಕೂಡ ಆಯ್ಕೆ  ಮಾಡಿಕೊಂಡಿದ್ದರಿಂದಾಗಿ ಈಗ ವಿಜ್ಞಾನಿಗಳು ಇದೇ ಪ್ರದೇಶವನ್ನೇ ಹೆಚ್ಚು ನೆಚ್ಚಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಒಂದೊಮ್ಮೆ ಲಡಾಕ್ನಲ್ಲಿಯೇ ನಿರ್ಮಿಸುವುದಾದರೂ ಕಾಮಗಾರಿ ಆರಂಭಿಸಲು ಇನ್ನೂ 18ರಿಂದ 24 ತಿಂಗಳು ತಡವಾಗುತ್ತದೆ ಎಂದು ಬಚಾಮ್ ಈಶ್ವರ್ ರೆಡ್ಡಿ ಹೇಳಿದ್ದಾರೆ. \

Write A Comment