ರಾಷ್ಟ್ರೀಯ

ತಿರುಪತಿ ತಿಮ್ಮಪ್ಪನ 7.5 ಟನ್‌ ಚಿನ್ನ ಪ್ರಧಾನಿ ಮೋದಿ ಯೋಜನೆ ಸೇರಲಿದೆ

Pinterest LinkedIn Tumblr

Tirupathi Goldತಿರುಪತಿ : ವಿಶ್ವದ ಅತ್ಯಂತ ಶ್ರೀಮಂತ ಹಿಂದು ದೇವಾಲಯ ಎನಿಸಿಕೊಂಡಿರುವ ಇಲ್ಲಿನ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಆಡಳಿತ ನಡೆಸುತ್ತಿರುವ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ), ತಿಮ್ಮಪ್ಪನ ಒಡೆತನದ ಎಲ್ಲ 7.5 ಟನ್‌ ಚಿನ್ನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವರ್ಷ ಚಾಲನೆ ನೀಡಿರುವ ಗೋಲ್ಡ್‌ ಮಾನಿಟೈಸೇಶನ್‌ ಸ್ಕೀಮ್‌ (ಚಿನ್ನ ನಗದೀಕರಣ ಯೋಜನೆ – ಜಿಎಂಎಸ್‌) ನಲ್ಲಿ ನಿಯೋಜಿಸಲು ಉದ್ದೇಶಿಸಿದೆ.

ಟಿಟಿಡಿ ಈಚೆಗೆ 1.3 ಟನ್‌ ಚಿನ್ನವನ್ನು ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌ ಗೆ ವರ್ಗಾಯಿಸಿತ್ತು. ಆ ಸಂದರ್ಭದಲ್ಲೇ ಅದು ಗೋಲ್ಡ್‌ ಮಾನಿಟೈಸೇಶನ್‌ ಸ್ಕೀಮ್‌ನ ನಿಯಮಗಳಲ್ಲಿ ಕೆಲವೊಂದು ಮಾರ್ಪಾಡು ಮಾಡುವಂತೆ ಕೇಂದ್ರ ಸರಕಾರವನ್ನು ಕೋರಿತ್ತು ಮತ್ತು ಆ ಮೂಲಕ ತನ್ನಲ್ಲಿನ ಎಲ್ಲ (7.5 ಟನ್‌) ಚಿನ್ನವನ್ನು ಆ ಯೋಜನೆಯಲ್ಲಿ ನಿಯೋಜಿಸುವ ತನ್ನ ಇಚ್ಛೆಯನ್ನು ವ್ಯಕ್ತಪಡಿಸಿತ್ತು.

‘ನಮ್ಮಲ್ಲಿ ಸುಮಾರು 7.5 ಟನ್‌ ಚಿನ್ನವಿದೆ ಮತ್ತು ಅದರಲ್ಲಿ ಹೆಚ್ಚಿನ ಪ್ರಮಾಣದ ಚಿನ್ನ ಬ್ಯಾಂಕಗಳಲ್ಲಿವೆ. ಟಿಟಿಡಿಯಲ್ಲಿರುವ ಚಿನ್ನವು ವಿವಿಧ ಬ್ಯಾಂಕುಗಳಲ್ಲಿ ವಿವಿಧ ಸ್ಕೀಮ್‌ಗಳಡಿ ನಿಯೋಜಿಸಲ್ಪಟ್ಟಿದೆ. ಈ ಸ್ಕೀಮ್‌ಗಳಲ್ಲಿ ಇರಿಸಲಾಗಿರುವ ಚಿನ್ನದ ಠೇವಣಿ ಅವಧಿಯು ಪಕ್ವಗೊಂಡಾಗ ಅವನ್ನು ಸಂಪೂರ್ಣ ಪ್ರಮಾಣದಲ್ಲಿ (7.5 ಟನ್‌) ಗೋಲ್ಡ್‌ ಮಾನಿಟೈಸೇಶನ್‌ ಸ್ಕೀಮ್‌ನಡಿ ನಿಯೋಜಿಸುವ ಆಲೋಚನೆ ನಮಗಿದೆ’ ಎಂದು ಟಿಟಿಡಿ ಕಾರ್ಯನಿರ್ವಹಣಾಧಿಕಾರಿ ಡಿ ಸಾಂಬಶಿವ ರಾವ್‌ ಅವರು ಇಂದಿಲ್ಲಿ ನಡೆದ ಕಾರ್ಯಕ್ರಮವೊಂದರ ಪಾರ್ಶ್ವದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

ಟಿಟಿಡಿಯ ಈ ಆಲೋಚನೆ ಕಾರ್ಯಗತವಾದಾಗ ತಿರುಪತಿ ತಿಮ್ಮಪ್ಪನ ಚಿನ್ನವು ಆವರ್ತನ ಕ್ರಮದಲ್ಲಿ ಚಿನ್ನದ ಹೊಳೆಯನ್ನೇ ಹರಿಸುವುದಲ್ಲದೆ ಪ್ರಧಾನಿ ಮೋದಿ ಅವರ ಚಿನ್ನದ ಯೋಜನೆ ಭಾರೀ ಯಶಸ್ಸನ್ನು ಕಂಡು ದೇಶದ ವಿದೇಶ ವಿನಿಮಯವನ್ನು ಕಾಪಿಡುವ ಮಹತ್ವಾಕಾಂಕ್ಷೆಯ ಯೋಜನೆ ಸಾಕಾರಗೊಂಡು ಇಡಿಯ ದೇಶಕ್ಕೆ ಲಾಭವಾಗಲಿದೆ.
-ಉದಯವಾಣಿ

Write A Comment