ರಾಷ್ಟ್ರೀಯ

ಮೇಯರ್ ವಿರುದ್ಧ ಸೋನಿಯಾಗೆ ಬಿಜೆಪಿ ದೂರು

Pinterest LinkedIn Tumblr

4soniya

ಬೆಂಗಳೂರು: ಬಿಬಿಎಂಪಿ ಸಭೆಯಲ್ಲಿ ಮಹಿಳಾ ಸದಸ್ಯರ ವಿರುದ್ಧ ಅವಹೇಳನಕಾರಿ ಪದ ಬಳಸಿರುವ ಮೇಯರ್ ಬಿ.ಎನ್. ಮಂಜುನಾಥ ರೆಡ್ಡಿ ವರ್ತನೆ ವಿರುದ್ಧ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರಿಗೆ ಪತ್ರ ಬರೆಯುವುದಾಗಿ ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ತಿಳಿಸಿದ್ದಾರೆ.

ಆಸ್ತಿ ತೆರಿಗೆ ಹೆಚ್ಚಳ ವಿರೋಧಿಸಿ ಬಿಜೆಪಿ ಸದಸ್ಯರು ಕೌನ್ಸಿಲ್ ಸಭಾಂಗಣದಲ್ಲಿ ನಡೆಸಿದ ಅಹೋರಾತ್ರಿ ಪ್ರತಿಭಟನೆ ಹಿಂಪಡೆದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೆರಿಗೆ ಹೆಚ್ಚಳ ವಿರೋಧಿಸಿ ಕೌನ್ಸಿಲ್ ಸಭೆಯಲ್ಲಿ ನ್ಯಾಯಯುತವಾಗಿ ಪ್ರತಿಭಟನೆ ನಡೆಸಿದ್ದೆವು. ಈ ವೇಳೆಮೇಯರ್ ಮಂಜುನಾಥ ರೆಡ್ಡಿ ಬಿಜೆಪಿ ಸದಸ್ಯರನ್ನುದ್ದೇಶಿಸಿ ‘ಥರ್ಡ್ ಗ್ರೇಡ್ ರಾಜಕೀಯ’ ಮಾಡುತ್ತಿದ್ದೀರಾ ಎಂದು ಕೀಳಾಗಿ ಮಾತನಾಡಿದ್ದಾರೆ.ಅಷ್ಟೇ ಅಲ್ಲದೆ ಮಹಿಳಾ ಸದಸ್ಯರ ಬಗ್ಗೆಯೂ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಇದು ಮೇಯರ್ ಸ್ಥಾನಕ್ಕೆ ತಕ್ಕ ವರ್ತನೆಯಲ್ಲ.ಹೀಗಾಗಿ ಮಂಜುನಾಥ ರೆಡ್ಡಿ ಅವರಿಗೆ ಆ ಸ್ಥಾನದಲ್ಲಿರಲುನೈತಿಕತೆಯಿಲ್ಲ. ಹೀಗಾಗಿ ಕೂಡಲೆ ರಾಜೀನಾಮೆ ನೀಡಬೇಕುಎಂದು ಆಗ್ರಹಿಸಿದರು.

ಮಂಜುನಾಥರೆಡ್ಡಿ ವರ್ತನೆಯಿಂದ ಅವರನ್ನು ಪೂಜ್ಯರೇ ಎಂದು ಸಂಬೋಧಿಸುವುದಕ್ಕೆ ಅಸಹ್ಯವೆನಿಸುತ್ತದೆ. ಮೇಯರ್ ನಗರದ ಜನರ ಕ್ಷಮೆ ಕೇಳಬೇಕು. ಈ ಕುರಿತಂತೆ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿಗೆ ಪತ್ರ ಬರೆಯಲಾಗುತ್ತದೆ ಎಂದರು.

ಅಮಾನತು ಇತಿಹಾಸದಲ್ಲೇ ಮೊದಲು:

ಬಿಜೆಪಿ ಸದಸ್ಯರು ಶಾಂತಿಯುತವಾಗಿಯೇ ಪ್ರತಿಭಟನೆ ನಡೆಸಿದ್ದರು. ಆದರೆ, ಕಾಂಗ್ರೆಸ್ ಸದಸ್ಯರು ನಮ್ಮ ಮೇಲೆ ದಬ್ಬಾಳಿಕೆ ಮಾಡಿ ಸಭೆಯ ಗೌರವ ಹಾಳು ಮಾಡಿದ್ದಾರೆ. ಆದರೆ, ನನ್ನನ್ನು ಸೇರಿ ಬಿಜೆಪಿಯ ನಾಲ್ವರು ಸದಸ್ಯರನ್ನು ಅಮಾನತು ಮಾಡಲಾಗಿದೆ. ಪ್ರತಿಪಕ್ಷದ ನಾಯಕನೊಬ್ಬನನ್ನು ಅಮಾನತು ಮಾಡಿರುವುದು ಇತಿಹಾಸದಲ್ಲೇ ಮೊದಲು. ಆಡಳಿತ ಪಕ್ಷದ ಜನವಿರೋಧಿ ನೀತಿ ವಿರುದ್ಧ ಪ್ರತಿಭಟಿಸುವುದು ವಿರೋಧ ಪಕ್ಷದ ಕರ್ತವ್ಯ. ಅದನ್ನೇ ಹತ್ತಿಕ್ಕುವ ಪ್ರಯತ್ನ ಮೇಯರ್ ಮಾಡಿದ್ದಾರೆ ಎಂದರು.

ಮೇ 3ಕ್ಕೆ ಬೃಹತ್ ಪ್ರತಿಭಟನೆ

ಮೇ 3ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಸಾವಿರಾರು ಕಾರ್ಯಕರ್ತರೊಂಡದಿಗೆ ಬಿಬಿಎಂಪಿಗೆ ಮುತ್ತಿಗೆ ಹಾಕಲಾ ಗುತ್ತದೆ. ಇನ್ನು ನಾಲ್ಕು ತಿಂಗಳಲ್ಲಿ ಕಾಂಗ್ರೆಸ್ ಅಧಿಕಾರ ಮುಗಿಯಲಿದ್ದು, ನಂತರ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಬಿಬಿಎಂಪಿಯಲ್ಲಿ ಕಾಂಗ್ರೆಸ್ ನಡೆಸುತ್ತಿರುವ ಕೊನೆಯ ಆಡಳಿತ ಇದಾಗಲಿದೆ ಎಂದು ಪದ್ಮನಾಭ ರೆಡ್ಡಿ ಹೇಳಿದರು.

ಆಯುಕ್ತರಿಗೆ ಮನವಿ

ಶುಕ್ರವಾರ ಅಹೋರಾತ್ರಿ ಧರಣಿ ನಡೆಸಿದ್ದ ಬಿಜೆಪಿ ಸದಸ್ಯರು. ಶನಿವಾರ ಬೆಳಗ್ಗೆ 10 ಗಂಟೆಗೆ ಧರಣಿ ಹಿಂಪಡೆದರು. ನಂತರ ಬಿಜೆಪಿ ಸದಸ್ಯರು, ಮಾಜಿ ಡಿಸಿಎಂಆರ್. ಅಶೋಕ್ ನೇತೃತ್ವದಲ್ಲಿ ಆಸ್ತಿ ತೆರಿಗೆ ಹೆಚ್ಚಳ ಕ್ರಮ ಹಿಂಪಡೆಯು ವಂತೆ ಆಯುಕ್ತ ಮಂಜುನಾಥ ಪ್ರಸಾದ್​ಗೆ ಮನವಿ ಸಲ್ಲಿಸಿದರು.

Write A Comment