ಮನೋರಂಜನೆ

ಒಲಿಂಪಿಕ್ಸ್ ರಾಯಭಾರಿ ಸ್ಥಾನಕ್ಕೆ ಸಲ್ಮಾನ್ ಜತೆ ಸಚಿನ್ ಮತ್ತು ಎಆರ್ ರಹಮಾನ್?

Pinterest LinkedIn Tumblr

salman-tandukar-rahman

ನವದೆಹಲಿ: ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ರಾಯಭಾರಿ ಸ್ಥಾನಕ್ಕೆ ಸಲ್ಮಾನ್ ಖಾನ್‌ನ್ನು ನೇಮಕ ಮಾಡಿರುವುದರ ಬಗ್ಗೆ ಅಪಸ್ವರ ಎದ್ದಿರುವ ಹಿನ್ನೆಲೆಯಲ್ಲಿ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಪ್ರಸ್ತುತ ರಾಯಭಾರಿ ಸ್ಥಾನ ಅಲಂಕರಿಸುವಂತೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಮತ್ತು ಸಂಗೀತ ಮಾಂತ್ರಿಕ ಎಆರ್ ರಹಮಾನ್ ಅವರನ್ನು ಸಂಪರ್ಕಿಸಿದೆ.

ಒಲಿಂಪಿಕ್ಸ್‌ಗೆ ಭಾರತದ ರಾಯಭಾರಿಯಾಗಲು ಸಚಿನ್ ತೆಂಡೂಲ್ಕರ್ ಮತ್ತು ಎಆರ್ ರೆಹಮಾನ್ ಅವರನ್ನು ಸಂಪರ್ಕಿಸಿದ್ದು, ಅವರಿಂದ ಈವರೆಗೆ ಯಾವುದೇ ಉತ್ತರ ಲಭಿಸಿಲ್ಲ ಎಂದು ಭಾರತೀಯ ಒಲಿಂಪಿಕ್ ಅಸೋಸಿಯೇಷನ್‌ನ ಉಪಾಧ್ಯಕ್ಷ ತರ್ಲೋಚನ್ ಸಿಂಗ್ ಹೇಳಿದ್ದಾರೆ.

ಈ ಸ್ಥಾನ ವಹಿಸುವಂತೆ ಹಲವರನ್ನು ನಾವು ಸಂಪರ್ಕಿಸಿದ್ದೇವೆ ಎಂದು ಹೇಳಿದ ಸಿಂಗ್, ಸಲ್ಮಾನ್ ಖಾನ್ ರನ್ನು ಈ ಸ್ಥಾನದಿಂದ ತೆಗೆದು ಹಾಕಿಲ್ಲ, ಅವರು ರಾಯಭಾರಿಯಾಗಿ ಉಳಿಯಲಿದ್ದಾರೆ ಎಂದಿದ್ದಾರೆ.

ಸಲ್ಮಾನ್ ಖಾನ್‌ರನ್ನು ರಾಯಭಾರಿಯಾಗಿ ನೇಮಕ ಮಾಡಿದ್ದಕ್ಕೆ ಕುಸ್ತಿ ಪಟು ಯೋಗೇಶ್ವರ್ ದತ್ ಮತ್ತು ಕ್ರೀಡಾಪಟು ಮಿಖಾ ಸಿಂಗ್ ಅಸಮಾಧಾನ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು.

Write A Comment