ರಾಷ್ಟ್ರೀಯ

ಕೆಂಪು ಕೋಟೆ ಮುಂದೆ ಡ್ಯಾನ್ಸ್‌ ಡ್ಯಾನ್ಸ್‌:ಇಂದು ರಾತ್ರಿ ಸುವರ್ಣದಲ್ಲಿ

Pinterest LinkedIn Tumblr

4_0ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ “ಡ್ಯಾನ್ಸ್‌ ಡ್ಯಾನ್ಸ್‌’ ರಿಯಾಲಿಟಿ ಷೋ, ದೇಶದ ವಿಶೇಷ ಸ್ಥಳಗಳಲ್ಲಿ ನಡೆದಿದ್ದು, ಈಗ ದೆಹಲಿಯ ಕೆಂಪುಕೋಟೆ ಮುಂದೆ ಸ್ಪರ್ಧಿಗಳು ಕುಣಿದು ಕುಪ್ಪಳಿಸಿದ್ದಾರೆ. ಈಗಾಗಲೇ ಪ್ರಪಂಚದ ಅದ್ಭುತಗಳಲ್ಲೊಂದಾದ ತಾಜ್‌ಮಹಲ್‌ ಎದುರು ಡ್ಯಾನ್ಸ್‌ ಷೋ ನಡೆಸಿದ್ದು, ನೋಡುಗರನ್ನು ರಂಜಿಸಿದೆ.

ಈಗ ಇನ್ನೊಂದು ಹೆಜ್ಜೆ ಮುಂದೆ ಹೋಗಿರುವ ಸುವರ್ಣ ವಾಹಿನಿಯು, ಈ ಬಾರಿ ಕೆಂಪುಕೋಟೆಯನ್ನು ಆಯ್ಕೆ ಮಾಡಿಕೊಂಡು ಅದರ ಮುಂದೆ ಡ್ಯಾನ್ಸ್‌ ಷೋ ನಡೆಸಿದೆ. ಈಗಾಗಲೇ ಡ್ಯಾನ್ಸ್‌ ಸ್ಪರ್ಧೆ ನಡೆದಿದ್ದು, ಗುರುವಾರ (ಇಂದು) ರಾತ್ರಿ 7.30 ಕ್ಕೆ ಆ ಡ್ಯಾನ್ಸ್‌ ಷೋ ಪ್ರಸಾರವಾಗಲಿದೆ.

1857ರಲ್ಲಿ ಪ್ರಥಮ ಸ್ವಾತಂತ್ರ ಸಂಗ್ರಾಮ ನಡೆದಾಗ, ಕಿಲ್ಲಾ-ಇ-ಮುಬಾರಕ್‌ ಎಂದೇ ಹೆಸರಾಗಿತ್ತು. ಆ ಬಳಿಕ ಅದನ್ನು ಕೆಂಪುಕೋಟೆ ಎಂದು ಮರುನಾಮಕರಣ ಮಾಡಲಾಗಿತ್ತು. 1639ರಲ್ಲಿ ಕೆಂಪುಕೋಟೆಯ ನಿರ್ಮಾಣ ಪ್ರಾರಂಭವಾಗಿ 1648ರಲ್ಲಿ ಪೂರ್ಣಗೊಂಡಿತು. ಸುಮಾರು 2.41ಕಿಲೋ ಮೀಟರ್‌ ವಿಸ್ತೀರ್ಣ ಹೊಂದಿರುವ ಈ ಕೆಂಪುಕೋಟೆ ಮುಂದೆ ಸುವರ್ಣ “ಡ್ಯಾನ್ಸ್‌ ಡ್ಯಾನ್ಸ್‌’ ಷೋ ನಡೆದಿರುವುದು ವಿಶೇಷತೆಗಳಲ್ಲೊಂದು.

ಪ್ರತಿ ಅಗಸ್ಟ್‌ 15ರಂದು ಪ್ರಧಾನ ಮಂತ್ರಿಗಳು ಕೆಂಪುಕೋಟೆ ಮೇಲೆ ಧ್ವಜಾರೋಹಣ ನೆರವೇರಿಸಿ, ಭಾಷಣ ಮಾಡುವ ಹಾಗು ಸೈನಿಕರಿಗೆ ಪರಮವೀರ ಚಕ್ರ ನೀಡುವ ಮೂಲಕ ದೇಶ ಭಕ್ತಿಯನ್ನು ಬಿಂಬಿಸುವ ಆ ಅಪರೂಪದ ಸ್ಥಳದ ಎದುರು ಡ್ಯಾನ್ಸ್‌ ಡ್ಯಾನ್ಸ್‌ ನ ಸ್ಪರ್ಧಿಗಳು ದೇಶ ಭಕ್ತಿಗೆ ಸಂಬಂಧ ಪಟ್ಟಂತಹ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ. ಈ ಮೂಲಕ ದೇಶಕ್ಕಾಗಿಯೇ ಹುತಾತ್ಮರಾದವರಿಗೆ ನಮನ ಸಲ್ಲಿಸಲಾಗಿದೆ.

ಆ ಐತಿಹಾಸಿಕ ತಾಣದಲ್ಲಿ ಬೃಹತ್‌ ವೇದಿಕೆ ನಿರ್ಮಿಸಿ ಡ್ಯಾನ್ಸ್‌ ಷೋ ನಡೆಸಿದ್ದು ಒಂದು ದಾಖಲೆಯಂತೂ ಹೌದು. ಅಂದಹಾಗೆ, ಕೆಂಪುಕೋಟೆ ಎದುರು ನಡೆದ ಡ್ಯಾನ್ಸ್‌ ಷೋ ಗುರುವಾರ (ಇಂದು) ರಾತ್ರಿ 7.30 ಕ್ಕೆ ಪ್ರಸಾರವಾಗಲಿದೆ.
-ಉದಯವಾಣಿ

Write A Comment