ಮನೋರಂಜನೆ

ಸೋನಂಳ ವಿಚಿತ್ರ ವರ್ತನೆಯ ರಹಸ್ಯ ವಿಡಿಯೋ ನಾಳೆ ಬಹಿರಂಗ

Pinterest LinkedIn Tumblr

sonam

ನವದೆಹಲಿ: ಬಾಲಿವುಡ್ ನ ಖ್ಯಾತ ನಟ ಅನಿಲ್ ಕಪೂರ್ ಅವರ ಮಗಳು ಸ್ಟೈಲಿಷ್ ನಟಿ ಸೋನಂ ಕಪೂರ್ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟು 9 ವರ್ಷವಾಯಿತು. ಆದರೆ ಆಕೆಯ ಹೊಸ ವಿಡಿಯೋವೊಂದು ಅಭಿಮಾನಿಗಳಲ್ಲಿ ಗೊಂದಲ ಹುಟ್ಟುಹಾಕಿದೆ. ನಟಿಗೆ ಏನಾದರೂ ಸಹಾಯದ ಅಗತ್ಯವಿದೆಯೇ ಎಂದು ಸಂಶಯ ಮೂಡುತ್ತದೆ.

30 ವರ್ಷದ ನಟಿ ಸೋನಂ ಕಪೂರ್ ತನ್ನ ಫೇಸ್ ಬುಕ್ ಪುಟದಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿದ್ದಾಳೆ. ಅದರ ಹೆಸರು ” ಮೈ ಇಂಟರ್ವೆನ್ಷನ್, ದೆಯರ್ ಇಂಟರ್ ಫೀರೆನ್ಸ್”.

ವಿಡಿಯೋ ತುಣಿಕಿನಲ್ಲಿ ಸೋನಂಳ ಸ್ನೇಹಿತರಾದ ಅತುಲ್ ಕಸ್ಬೇಕಾರ್, ರಿಯಾ ಕಪೂರ್, ಸ್ವರ ಭಾಸ್ಕರ್ ಮತ್ತು ನಮೃತಾ ಸೋನಿಯವರು ಸೋನಂ ಕಪೂರ್ ಳ ವಿಚಿತ್ರ ಹಾಗೂ ಸಂಶಯ ಬರುವ ನಡವಳಿಕೆಯಿಂದ ತುಂಬಾ ಗಾಬರಿಯಾಗಿದ್ದಾರೆ ಮತ್ತು ಗೊಂದಲಕ್ಕೀಡಾಗಿದ್ದಾರೆ.

ಸೋನಂಗೆ ಯಾರಾದರೂ ಮಧ್ಯ ಪ್ರವೇಶಿಸಿ ಸಹಾಯ ಮಾಡಬೇಕಾಗಿದೆ ಎಂದು ಅವರೆಲ್ಲ ವಿಡಿಯೋದಲ್ಲಿ ಹೇಳುತ್ತಾರೆ. ನಂತರ ಜಗಳವಾಡುತ್ತಾರೆ,ಆಗ ಸೋನಂ ತಾನು ಹುಚ್ಚಿಯಲ್ಲ ಎಂದು ಹೇಳುತ್ತಾಳೆ.

ಹಾಗಾದರೆ ಏನಿದು, ಸೋನಂಗೆ ನಿಜಕ್ಕೂ ಏನಾಗಿತ್ತು? ಆಕೆಗೆ ಕಾಡಿದ ಗೊಂದಲಗಳೇನು? ಇವೆಲ್ಲವುಗಳ ಹಿಂದಿರ ರಹಸ್ಯ ತಿಳಿದುಕೊಳ್ಳಬೇಕಾದರೆ ನಾಳೆಯವರೆಗೆ ಕಾಯಬೇಕು.

Write A Comment