ಮನೋರಂಜನೆ

ಸಾಯುವುದಕ್ಕೂ ಮುನ್ನ ಪ್ರತ್ಯೂಷ ರಾಹುಲ್’ಗೆ ಹೇಳಿದ್ದೇನು?

Pinterest LinkedIn Tumblr

pratyusha

ಮುಂಬೈ: ಕಿರುತರೆ ನಟಿ ಪ್ರತ್ಯೂಷ ಬ್ಯಾನರ್ಜಿ ಸಾವು ಕುರಿತಂತೆ ಸಾಕಷ್ಟು ಅನುಮಾನಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಇತ್ತೀಚೆಗಷ್ಟೇ ಪ್ರತ್ಯೂಷ ಸಾಯುವುದಕ್ಕೂ ಮುನ್ನ ರಾಹುಲ್ ಗೆ ಕರೆ ಮಾಡಿ ಮಾತನಾಡಿದ್ದಳು ಎಂಬ ವಿಚಾರ ಬೆಳಕಿಗೆ ಬಂದಿತ್ತು. ಆದರೆ, ಏನನ್ನು ಮಾತನಾಡಿದ್ದಳು ಎಂಬ ವಿಚಾರ ಈ ವರೆಗೂ ಯಾರಿಗೂ ತಿಳಿದಿರಲಿಲ್ಲ.

ಇದೀಗ ಪ್ರತ್ಯೂಷ ಸಾಯುವುದಕ್ಕೂ ಮುನ್ನ ರಾಹುಲ್ ನೊಂದಿಗೆ ಮಾತನಾಡಿದ್ದ ಸಂಭಾಷಣೆಯನ್ನು ಖಾಸಗಿ ಮಾಧ್ಯಮವೊಂದು ವರದಿ ಮಾಡಿದ್ದು, ವರದಿಯಲ್ಲಿ ಸಾಯುವುದಕ್ಕೂ ಮುನ್ನ ಪ್ರತ್ಯೂಷ 3 ನಿಮಿಷಗಳ ಕಾಲ ರಾಹುಲ್ ನೊಂದಿಗೆ ಮಾತನಾಡಿದ್ದು, ರಾಹುಲ್ ನನ್ನು ಮೋಸಗಾರ ಎಂದಿದ್ದಾಳೆ.

ನೀನೊಬ್ಬ ಮೋಸಗಾರ. ನನಗೆ ಮೋಸ ಮಾಡಿದ್ದೀಯ…ನನ್ನನ್ನು ನನ್ನ ತಂದೆ-ತಾಯಿಯಿಂದ ದೂರ ಮಾಡಿದೆ…ಈಗ ನೋಡು ನಾನು ಏನು ಮಾಡುತ್ತೇನೆಂದು ಹೇಳಿಕೊಂಡಿದ್ದಾಳೆ. ಇದರಂತೆ ರಾಹುಲ್ ಕೂಡ ಪ್ರತಿಕ್ರಿಯೆ ನೀಡಿದ್ದು, ಯಾವ ವಿಚಾರದಲ್ಲಿ ನಾನು ಮೋಸ ಮಾಡಿದೆ…ಏನಾಯಿತು? ಮನೆ ದಾರಿಯಲ್ಲಿದ್ದು, ಮನೆಗೆ ಬಂದ ನಂತರ ಮಾತನಾಡುತ್ತೇನೆ. ನಾನು ಮನೆಗೆ ಬರುವವರೆಗೂ ಏನನ್ನೂ ಮಾಡಬೇಡ ಎಂದಿದ್ದಾರೆ.

ಇನ್ನು ಈ ಸಂಭಾಷಣೆಯನ್ನು ಪ್ರತ್ಯೂಷ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರು ಕೂಡ ಕೇಳಿದ್ದಾರೆ. ವಿಚಾರಣೆ ವೇಳೆ ಪಬ್ಲಿಕ್ ಪ್ರಾಸಿಕ್ಯೂಟರ್ ಉಷಾ ಕೇಜ್ರಿವಾಲ್ ಅವರು, ಪ್ರತ್ಯೂಷ ಸಾಯುವ ವಿಚಾರ ಸುಳಿವನ್ನು ಸಂಭಾಷಣೆ ವೇಳೆ ರಾಹುಲ್ ಗೆ ನೀಡಿದ್ದಳು. ಇನ್ನು ಇಬ್ಬರ ನಡುವೆ ಪ್ರೀತಿಯಿದ್ದದ್ದು ಇದರಿಂದ ತಿಳಿದುಬರುತ್ತಿದ್ದು, ಪ್ರತ್ಯೂಷ ಆತ್ಮಹತ್ಯೆಗೆ ರಾಹುಲ್ ನೇರಹೊಣೆಯಾಗಿದ್ದಾರೆಂದು ಹೇಳಿದ್ದರೆಂದು ತಿಳಿದುಬಂದಿದೆ.

ಬಾಲಿಕಾ ವಧು ಧಾರಾವಾಹಿ ಮೂಲಕ ಕಿರುತೆರೆಗೆ ಹೆಜ್ಜೆಯಿಟ್ಟಿದ್ದ ಪ್ರತ್ಯೂಷ ಬ್ಯಾನರ್ಜಿಯವರು ನಂತರ ಸಾಕಷ್ಟು ಖ್ಯಾತಿ ಗಳಿಸಿದ್ದರು. ಏ.1 ರಂದು ನೇಣಿಗೆ ಶರಣಾಗುವ ಮೂಲಕ ಪ್ರತ್ಯೂಷ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರತ್ಯೂಷ ಇದ್ದಕ್ಕಿದ್ದಂತೆ ಆತ್ಮಹತ್ಯೆಗೆ ಕಿರುತೆರೆ ಸೇರಿದಂತೆ ಹಿರಿತೆರೆ ನಟ-ನಟಿಯರು ಆಘಾತ ವ್ಯಕ್ತಪಡಿಸಿದ್ದರು. ಅಲ್ಲದೆ, ಆತ್ಮಹತ್ಯೆ ಕುರಿತಂತೆ ರಾಹುಲ್ ಬಗ್ಗೆ ಹಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದರು. ಪ್ರಸ್ತುತ ರಾಹುಲ್ ನನ್ನು ಮುಂಬೈ ಪೊಲೀಸರು ಬಂಧನಕ್ಕೊಳಪಡಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.

Write A Comment