ಮನೋರಂಜನೆ

ಬ್ರಾಡ್ ಗೆ ಯುವಿ ಸತತ 6 ಸಿಕ್ಸರ್ ಹೊಡೆಯಲು ಕಾರಣವಾದ ಆ ಘಟನಾವಳಿಯ ಬಗ್ಗೆ ಸ್ವತಃ ಯುವಿ ಹೇಳಿಕೊಂಡಿದ್ದಾರೆ…..ಏನು ಹೇಳಿದ್ದಾರೆ ನೀವೇ ಓದಿ…

Pinterest LinkedIn Tumblr

yuva

ನವದೆಹಲಿ: 2007ರ ಪ್ರಥಮ ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಇಂಗ್ಲೆಂಡ್ ನ ವೇಗಿ ಸ್ಟುವರ್ಟ್ ಬ್ರಾಡ್ ಗೆ ಸತತ 6 ಸಿಕ್ಸರ್ ಹೊಡೆಯಲು ಕಾರಣವಾದ ಘಟನಾವಳಿಯ ಬಗ್ಗೆ ಸ್ವತಃ ಯುವಿ ಹೇಳಿಕೊಂಡಿದ್ದಾರೆ.

ಸ್ಟುವರ್ಟ್ ಬ್ರಾಡ್ ಓವರ್ ಗೂ ಮುನ್ನ ಮಾಡಿದ್ದ ಆ್ಯಂಡ್ರೂ ಫ್ಲಿಂಟಾಫ್ ಓವರ್ ನಲ್ಲಿ ನಾನು 2 ಬೌಂಡರಿ ಬಾರಿಸಿದ್ದೆ ಇದರಿಂದ ಕೋಪಗೊಂಡ ಫ್ಲಿಂಟಾಫ್ ನನ್ನನ್ನು ನಿಂದಿಸಿದರು. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಅದರಲ್ಲೂ ಬಳಸಬಾರದ ಪದಗಳನ್ನು ಫ್ಲಿಂಟಾಫ್ ಬಳಸಿದ್ದು ನನ್ನ ಕೋಪಕ್ಕೆ ಕಾರಣವಾಯಿತು. ಆ ಕೋಪ ಸ್ಟುವರ್ಟ್ ಬ್ರಾಡ್ ಓವರ್ ನಲ್ಲಿ ಸತತ 6 ಸಿಕ್ಸರ್ ಬಾರಿಸುವುದರೊಂದಿಗೆ ಫ್ಲಿಂಟಾಫ್ ಬಾಯಿ ಮುಚ್ಚಿಸಿದೆ ಎಂದರು ಹೇಳಿಕೊಂಡಿದ್ದಾರೆ.

ರಣಕಣದಲ್ಲಿ ಫ್ಲಿಂಟಾಫ್ ಹಾಗೂ ಯುವಿ ನಡುವಿನ ಜಗಳದ ಮಾತುಗಳು
ಫ್ಲಿಂಟಾಫ್: ಎರಡು ಬೌಂಡರಿ ಬಾರಿಸಿದ್ದರ ಕುರಿತಾಗಿ ಫ್ಲಿಂಟಾಫ್ ಅವು ದರಿದ್ರ—–ಹೊಡೆತಗಳು.
ಯುವಿ: ಐ ವಿಲ್—–ಯೂ.
ಫ್ಲಿಂಟಾಫ್: ಏನಂದೆ?
ಯುವಿ: ನಾನು ಏನು ಹೇಳಿದೆ ಎಂದು ನಿನಗೆ ಗೊತ್ತಿದೆ.
ಫ್ಲಿಂಟಾಫ್: ನಿನ್ನ ಕತ್ತು ಕತ್ತರಿಸುತ್ತೀನಿ.
ಯುವಿ: ನನ್ನ ಕೈಲಿ ಬ್ಯಾಟಿರೋದು ಕಾಣ್ತಾ ಇದೆಯಾ? ಇದರಿಂದ ನಾನು ಎಲ್ಲಿಗೆ ಹೊಡೆಯಬಹುದೆಂದು ಗೊತ್ತಾ ನಿನಗೆ?
ಈಗೇ ಇಬ್ಬರ ನಡುವೆ ಮಾತಿನ ಸಮರ ಆರಂಭವಾಗಿದ್ದು ಇದರಿಂದ ಕೋಪಗೊಂಡ ಯುವಿ ಮುಂದಿನ ಓವರ್ ನಲ್ಲಿ ಸಿಕ್ಸರ್ ಬಾರಿಸಬೇಕು ಅನಿಸಿತಂತೆ.

Write A Comment