ರಾಷ್ಟ್ರೀಯ

10 ಸಾವಿರ ಕೋಟಿ ದಾಟಲಿರುವ ಪತಂಜಲಿ ಸಂಸ್ಥೆಯ ಆದಾಯ?

Pinterest LinkedIn Tumblr

baba_ramdev

ನವದೆಹಲಿ: 2016-17 ನೇ ಸಾಲಿನಲ್ಲಿ ರಾಮ್ ದೇವ್ ಅವರ ಪತಂಜಲಿ ಆಯುರ್ವೇದ ಸಂಸ್ಥೆ 10 ,000 ಕೋಟಿ ಆದಾಯ ಗಳಿಸುವ ಸಾಧ್ಯತೆ ಇದ್ದು, ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರ ಸ್ಥಾಪನೆ ಹಾಗೂ ಸಂಸ್ಕರಣ ಘಟಕಗಳಿಗಾಗಿ 1 ,150 ಕೋಟಿ ರೂ ವಿನಿಯೋಗಿಸುವ ಸಾಧ್ಯತೆ ಇದೆ.

ಪತಂಜಲಿ ಆಯುರ್ವೇದದ ಸಂಸ್ಥೆಯೊಂದಿಗೆ ದೇಶಿ ಸಂಸ್ಥೆಯಾಗಿರುವ ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ ಗೂಡ್ಸ್ (ಎಫ್ಎಂಸಿಜಿ) ಸಹ ನೆಸ್ಲೆ, ಪಿ&ಜಿ ಹಾಗೂ ಹಿಂದೂಸ್ಥಾನ್ ಯುನಿಲಿವರ್ ನಂತಹ ಬಹುರಾಷ್ಟ್ರೀಯ ಕಂಪನಿಗಳಿಗೆ ಪೈಪೋಟಿ ನೀಡಿದೆ.

ಪತಂಜಲಿ ಸಂಸ್ಥೆ 4,000 ವಿತರಕರು, 10 ,000 ಮಳಿಗೆಗಳು ಹಾಗೂ 100 ಪತಂಜಲಿ ಮೆಗಾ ಮಾರ್ಟ್ ಹೊಂದಿದ್ದು ಗುರಿ ತಲುಪಲು ಸಹಕಾರಿಯಾಗಲಿದೆ ಎಂಬ ನಿರೀಕ್ಷೆಯಲ್ಲಿದೆ. ಪತಂಜಲಿ ಆಯುರ್ವೇದ ಸಂಸ್ಥೆ ಅಂತಾರಾಷ್ಟ್ರೀಯ ಮಾರುಕಟ್ಟೆಗೂ ಲಗ್ಗೆ ಇಡುವ ಮಹತ್ವಾಕಾಂಕ್ಷೆ ಹೊಂದಿದೆ ಎಂದು ಪತಂಜಲಿ ಸಂಸ್ಥೆಯ ಸ್ಥಾಪಕ ಬಾಬಾ ರಾಮ್ ದೇವ್ ತಿಳಿಸಿದ್ದಾರೆ.

ಇನ್ನು ಆಧುನಿಕ ವಿಭಾಗಗಳಾದ ಡೈರಿ, ಪಶು ಆಹಾರ, ಯೋಗಕ್ಕಾಗಿ ಖಾದಿ ವಸ್ತ್ರಗಳನ್ನು ತಯಾರಿಸುವ ಉದ್ಯಮದಲ್ಲೂ ಪತಂಜಲಿ ಬ್ರಾಂಡ್ ಪರಿಚಯವಾಗಲಿದೆಯಂತೆ. ಉದ್ಯಮ ವಿಸ್ತರಣೆಗೆ ಬಂಡವಾಳದ ಬಗ್ಗೆಯೂ ಮಾಹಿತಿ ನೀಡಿರುವ ಪತಂಜಲಿ ಸಂಸ್ಥೆ ಮುಖ್ಯಸ್ಥ ಬಾಬಾ ರಾಮ್ ದೇವ್, ಸಾಲ ನೀಡಲು ಬ್ಯಾಂಕ್ ಗಳು ಸಿದ್ಧವಾಗಿವೆ. ಉದ್ಯಮವನ್ನು ವಿಸ್ತರಿಸಲು ಹಣಕಾಸಿನ ಕೊರತೆ ಇಲ್ಲ ಎಂದು ತಿಳಿಸಿದ್ದಾರೆ.

Write A Comment