ರಾಷ್ಟ್ರೀಯ

ಬಿಜೆಪಿ ಸಂಸದ ರಾಮಪ್ರಸಾದ್ ಶರ್ಮ ಕುದುರೆ ಏರಿ ಸಂಸತ್ತಿಗೆ ಬಂದಿದ್ದು ಏಕೆ ಗೊತ್ತಾ…?

Pinterest LinkedIn Tumblr

ram

ನವದೆಹಲಿ: ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಸರ್ಕಾರ ದೆಹಲಿಯಲ್ಲಿ ಜಾರಿಗೆ ತಂದಿರುವ ಸಮ-ಬೆಸ ವಾಹನ ಸಂಚಾರ ಯೋಜನೆಗೆ ವಿರೋಧ ವ್ಯಕ್ತಿಪಡಿಸಿ ಪ್ರತಿಭಟನಾರ್ಥವಾಗಿ ಬಿಜೆಪಿ ಸಂಸದ ರಾಮ್ ಪ್ರಸಾದ್ ಶರ್ಮಾ ಅವರು ಬುಧವಾರ ಕುದುರೆಯೇರಿ ಸಂಸತ್ತಿಗೆ ಆಗಮಿಸಿದರು.

ಇಂದು ಸಂಸತ್ತಿಗೆ ಕುದುರೆ ಏರಿ ಬಂದ ರಾಮ್ ಪ್ರಸಾದ್ ಶರ್ಮಾ ಅವರು, ತಮ್ಮ ಕುದುರೆಗೆ ‘ಮಾಲಿನ್ಯ ಮುಕ್ತ ವಾಹನ’ ಎಂಬ ಫಲಕ ಹಾಕಿದ್ದರು. ಅಲ್ಲದೆ ಸಮ-ಬೆಸ ಯೋಜನೆಯಿಂದ ತುರ್ತು ಕೆಲಸಗಳಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಸೋಮವಾರ ಸಮ-ಬೆಸ ನಿಯಮ ಉಲ್ಲಂಘಿಸಿದ್ದ ಮತ್ತೊಬ್ಬ ಬಿಜೆಪಿ ಸಂಸದ ಪರೇಶ್ ರಾವಲ್ ಅವರಿಗೆ ದಂಡ ವಿಧಿಸಲಾಗಿತ್ತು. ದೆಹಲಿ ಸರ್ಕಾರ ಸಮ-ಬೆಸ ಯೋಜನೆಯಿಂದ ಸಂಸದರಿಗೆ ತೊಂದರೆಯಾಗದಿರಲಿ ಎಂದು ಹವಾನಿಯಂತ್ರಿತ ಬಸ್​ಗಳ ವ್ಯವಸ್ಥೆ ಮಾಡಿದೆ. ಆದರೆ ಮೊದಲ ದಿನವೇ ಸಂಸದರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗದ ಹಿನ್ನೆಲೆಯಲ್ಲಿ ಬಸ್ ಸೇವೆಯನ್ನು ದೆಹಲಿ ಸರ್ಕಾರ ಹಿಂಪಡೆದಿತ್ತು. ಉತ್ತರ ಪ್ರದೇಶದ ಹದೋಯ್ನ ಸಂಸದ ಅನ್ಶುಲ್ ವರ್ಮಾ ಮಾತ್ರ ಬಸ್​ನಲ್ಲಿ ಸಂಚರಿಸಿದ್ದರು. ಅನ್ಶುಲ್ ದೆಹಲಿ ಸರ್ಕಾರ ಸೇವೆಯನ್ನು ಬಳಕೆ ಮಾಡಿಕೊಳ್ಳಲು ಬಸ್​ನಲ್ಲಿ ಸಂಸತ್ತಿಗೆ ಆಗಮಿಸುತ್ತಿದ್ದೇನೆ ಎಂದು ತಿಳಿಸಿದ್ದರು.

Write A Comment