ರಾಷ್ಟ್ರೀಯ

ಡಿಎಂಕೆ ಅಧಿಕಾರಕ್ಕೆ ಬಂದರೆ ಮದ್ಯಪಾನ ನಿಷೇಧ : ಎಂ.ಕರುಣಾನಿಧಿ ಭರವಸೆ

Pinterest LinkedIn Tumblr

dmkಚೆನ್ನೈ, ಏ.26-ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆ ಅಧಿಕಾರಕ್ಕೆ ಬಂದರೆ ಮೊಟ್ಟ ಮೊದಲನೆಯದಾಗಿ ಮದ್ಯಪಾನ ನಿಷೇಧಗೊಳಿಸುವುದಾಗಿ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಭರವಸೆ ನೀಡಿದ್ದಾರೆ. ಈಗಾಗಲೇ ವಿವಿಧ ರಾಜ್ಯಗಳಲ್ಲಿ ಮದ್ಯಪಾನ ನಿಷೇಧ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗುತ್ತಿದೆ. ಬಿಹಾರ ಕೂಡ ಮದ್ಯಪಾನ ನಿಷೇಧ ಮಾಡಿದೆ. ಅದೇ ಮಾದರಿಯಲ್ಲಿ ತಮಿಳುನಾಡಿನಲ್ಲಿ ಮದ್ಯಪಾನ ನಿಷೇಧ ಜಾರಿಗೊಳಿಸುವುದಾಗಿ ಚುನಾವಣೆ ಪೂರ್ವ ಭಾಷಣದಲ್ಲಿ ಭರವಸೆ ನೀಡಿದ್ದಾರೆ.

ಮೇ 16 ರಂದು ತಮಿಳುನಾಡು ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಜಯಲಲಿತಾ ಬಳಿ 113 ಕೋಟಿ ಆಸ್ತಿ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಆಸ್ತಿ ಕುಗ್ಗಲಾರಂಭಿಸಿದೆ. ಈ ಬಾರಿ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ತಮ್ಮ ಆಸ್ತಿ 3.40 ಕೋಟಿ ಕಡಿಮೆಯಾಗಿದೆ ಎಂದು ಜಯಲಲಿತಾ ತಿಳಿಸಿದ್ದಾರೆ. ಆರ್.ಕೆ.ನಗರ್ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಜಯಲಲಿತಾ ಅವರು ಆಯೋಗಕ್ಕೆ ತಮ್ಮ ಆಸ್ತಿಯ ಪ್ರಮಾಣ ಪತ್ರಗಳನ್ನು ಸಲ್ಲಿಸಿದ್ದು, 41.63 ಕೋಟಿ ಸ್ಥಿರಾಸ್ತಿ, 72.09 ಕೋಟಿ ಚರಾಸ್ತಿ ಸೇರಿ 113.73 ಕೋಟಿ ಆಸ್ತಿ ಹೊಂದಿರುವುದಾಗಿ ತಿಳಿಸಿದ್ದಾರೆ.

2015ರ ಉಪಚುನಾವಣೆಯಲ್ಲಿ ಆಸ್ತಿ ವಿವರ ಸಲ್ಲಿಸಿದ್ದ ಜಯಲಲಿತಾ ಅವರು, ತಮ್ಮ ಬಳಿ 45.4 ಕೋಟಿ ಸ್ಥಿರಾಸ್ತಿ, 72.9 ಕೋಟಿ ಚರಾಸ್ತಿ ಸೇರಿ ಒಟ್ಟು 117.13 ಕೋಟಿ ಆಸ್ತಿ ಇರುವುದಾಗಿ ಘೋಷಿಸಿಕೊಂಡಿದ್ದರು. 2011ರ ಶ್ರೀನಗರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಜಯಲಲಿತಾ ಅವರು 51.40 ಕೋಟಿ, 2006ರ ವಿಧಾನಸಭೆ ಚುನಾವಣೆಯಲ್ಲಿ 24.7 ಕೋಟಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ಆ ಸಂದರ್ಭಗಳಲ್ಲಿ ಪ್ರಮಾಣ ಪತ್ರ ಸಲ್ಲಿಸಿದ್ದರು.

Write A Comment