ರಾಷ್ಟ್ರೀಯ

ಓ ದೇವರೇ, ಹೈದರಾಬಾದ್‌ ಪೌರಾಡಳಿತೆ ವೆಬ್‌ಸೈಟಲ್ಲಿ ಸನ್ನಿ ನಗ್ನ ಚಿತ್ರ

Pinterest LinkedIn Tumblr

Sunny Leone-700ಹೈದರಾಬಾದ್‌ : ವಿಶ್ವ ಖ್ಯಾತಿಯ ಬ್ಲೂ ಫಿಲಂ ನಟಿ ಸನ್ನಿ ಲಿಯೋನ್‌ ಳ ನಗ್ನ ಫೋಟೋ ಹೈದರಾಬಾದ್‌ ಮುನಿಸಿಪಲ್‌ ಕಾರ್ಪೊರೇಶನ್‌ನ ವೆಬ್‌ ಸೈಟಿನಲ್ಲಿ ಬಹಳ ಹೊತ್ತು ಕಾಣಿಸಿಕೊಂಡು ಪೌರಾಡಳಿತೆಯ ಅಧಿಕಾರಿಗಳಿಗೆ ತೀವ್ರ ಮುಜುಗರ ಉಂಟುಮಾಡಿದ ಘಟನೆ ವರದಿಯಾಗಿದೆ.

ಸನ್ನಿ ಲಿಯೋನ್‌ ಳ ನಗ್ನ ಚಿತ್ರವನ್ನು ವೆಬ್‌ ಸೈಟಿನಿಂದ ತತ್‌ಕ್ಷಣ ತೆಗೆದು ಹಾಕುವ ಗಂಭೀರ ಪ್ರಯತ್ನಗಳನ್ನು ನಡೆಸಲಾದರೂ ಅದು ಕೂಡಲೇ ಫ‌ಲಕಾರಿಯಾಗಲಿಲ್ಲ; ಹಾಗಾಗಿ ಬಹಳ ಹೊತ್ತು ಸನ್ನಿ ಲಿಯೋನ್‌ ನಗ್ನತೆ ಮುನಿಸಿಪಲ್‌ ಕಾರ್ಪೊರೇಶನ್‌ನ ವೆಬ್‌ಸೈಟಿನಲ್ಲಿ ರಾರಾಜಿಸುವಂತಾದದ್ದು ಅಧಿಕಾರಿಗಳಿಗೆ ತೀವ್ರ ಮುಜುಗರ ಉಂಟುಮಾಡಿತು.

ಹೈದರಾಬಾದ್‌ ಮುನಿಸಿಪಲ್‌ ಕಾರ್ಪೊರೇಶನ್‌ನ ವೆಬ್‌ಸೈಟಿನಲ್ಲಿ ಮುಖ್ಯ ಪುಟದಲ್ಲಿ ಹಾಗೂ ಹಲವಾರು ಲಿಂಕ್‌ ಪುಟಗಳಲ್ಲಿ ಬ್ಲೂ ಫಿಲಂ ನಟಿ ಸನ್ನಿ ಲಿಯೋನ್‌ ಳ ನಗ್ನ ಚಿತ್ರ ಕಾಣಿಸಿಕೊಂಡ ವಿಷಯ ಎಲ್ಲೆಡೆ ಕಾಳ್‌ಗಿಚ್ಚಿನಂತೆ ಹರಡಿಕೊಂಡಾಗ ಪೌರಾಡಳಿತೆಯ ಅಧಿಕಾರಿಗಳ ಮುಖ ಬಿಳಿಚಿಕೊಂಡಿತು.

ಸನ್ನಿ ಲಿಯೋನ್‌ ಳ ನಗ್ನ ಚಿತ್ರ ಮೊದಲಾಗಿ ಕಾಣಿಸಿಕೊಂಡದ್ದು ಗ್ರೇಟರ್‌ ಹೈದರಾಬಾದ್‌ ಮುನಿಸಿಪಲ್‌ ಕಾರ್ಪೊರೇಶನ್‌ (ಜಿಎಚ್‌ಎಂಸಿ) ಇದರ ಆಫ್ಸೈಟ್‌ ರಿಯಲ್‌ ಮಾನಿಟರಿಂಗ್‌ ಸಿಸ್ಟಮ್‌ ನ ಜಾಲ ತಾಣದಲ್ಲಿ. ಈ ಜಾಲ ತಾಣವು ನಗರದಲ್ಲಿನ ಕಸ ಸಂಗ್ರಹಿಸಿ ಸಾಗಿಸುವ ಟ್ರಕ್‌ ಗಳ ಮೇಲೆ ಕಣ್ಗಾವಲು ಇಡುವ ಕೆಲಸವನ್ನು ನಿರ್ವಹಿಸುತ್ತದೆ.

ಈ ಜಾಲ ತಾಣದಲ್ಲಿ ಕಾಣಿಸಿಕೊಂಡ ಸನ್ನಿ ಲಿಯೋನ್‌ ಳ ನಗ್ನ ಚಿತ್ರ ಹಲವಾರು ವೆಬ್‌ಸೈಟಿನ ಹಲವಾರು ಲಿಂಕ್‌ ಪುಟಗಳಲ್ಲಿ ಕಾಣಿಸಿಕೊಂಡಾಗಲೇ ಅದು ವಿಶ್ವವ್ಯಾಪಿ ಎಂಬಂತೆ ಎಲ್ಲರನ್ನೂ ತಲುಪತೊಡಗಿತು. ಈ ಅಶ್ಲೀಲ ಫೋಟೋವನ್ನು ಜಾಲ ತಾಣದಿಂದ ತತ್‌ಕ್ಷಣವೇ ಕಿತ್ತು ಹಾಕಲು ಪೌರಾಡಳಿತೆಯ ಐಟಿ ತಂಡದವರು ಶತ ಪ್ರಯತ್ನ ನಡೆಸಿದರೂ ಸಾಧ್ಯವಾಗಲಿಲ್ಲ. ಹಾಗಾಗಿ ಬಹಳ ಹೊತ್ತು ಸನ್ನಿ ಲಿಯೋನ್‌ ಳ ನಗ್ನತೆಯನ್ನು ಪುಕ್ಕಟೆಯಾಗಿ ಆಸ್ವಾದಿಸುವ ಅವಕಾಶ ಜಾಲತಾಣ ಸಂದರ್ಶಕರಿಗೆ ಪ್ರಾಪ್ತವಾಯಿತು.

ಹೈದರಾಬಾದ್‌ ಪೌರಾಡಳಿತೆ ಹೇಳುವ ಪ್ರಕಾರ ತನ್ನ ಈ ಜಾಲ ತಾಣವನ್ನು ನಿರ್ವಹಿಸುತ್ತಿರುವುದು “ಸೆಂಟರ್‌ ಫಾರ್‌ ಗುಡ್‌ ಗವರ್ನನೆನ್ಸ್‌’; ಹಾಗಾಗಿ ಈ ಪ್ರಕರಣದ ಸಂಪೂರ್ಣ ಹೊಣೆ ಅದರದ್ದೇ ಆಗಿದೆ.

ಎಲ್ಲಕ್ಕಿಂತ ವಿಶೇಷವೆಂದರೆ ಹೈದರಾಬಾದ್‌ ಪೌರಾಡಳಿತೆಯ ಈ ಅಧಿಕೃತ ವೆಬ್‌ಸೈಟನ್ನು ಯಾರೋ ಹೊರಗಿನವರು, ಅಥವಾ ಒಳಗಿನವರು, ಹ್ಯಾಕ್‌ ಮಾಡಿರಬಹುದೇ ಇಲ್ಲವೇ ಎಂಬುದು ಈ ತನಕವೂ ಗೊತ್ತಾಗಿಲ್ಲ.
-ಉದಯವಾಣಿ

Write A Comment