ರಾಷ್ಟ್ರೀಯ

ಪಿಂಚಣಿ ಸಿಗದ ಹತಾಶೆಯಲ್ಲಿ ನಾಲಗೆ ಕತ್ತರಿಸಿಕೊಂಡ ಹಿರಿಯ ನಾಗರಿಕ

Pinterest LinkedIn Tumblr

Telangana-finalಹೈದರಾಬಾದ್‌ : ಅತ್ಯಂತ ಆಘಾತಕಾರಿ ವಿದ್ಯಮಾನವೊಂದರಲ್ಲಿ ಹಿರಿಯ ನಾಗರಿಕರೊಬ್ಬರು ತಮಗೆ ವೃದ್ಧಾಪ್ಯ ಪಿಂಚಣಿ ದೊರಕಲಿಲ್ಲ ಎಂಬ ಹತಾಶೆಯಲ್ಲಿ ತೆಲಂಗಾಣ ಮಂತ್ರಾಲಯದ ಹೊರಗೆ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಲು ತಮ್ಮ ನಾಲಗೆಯನ್ನೇ ಕತ್ತರಿಸಿಕೊಂಡಿರುವುದು ವರದಿಯಾಗಿದೆ.

ಪಿಂಚಣಿ ಸಿಗದ ಹತಾಶೆಯಲ್ಲಿ ನಾಲಗೆ ಕತ್ತರಿಸಿಕೊಂಡಿರುವ ಈ ಹಿರಿಯ ನಾಗರಿಕ, ತಾನು ಪಿಂಚಣಿಗಾಗಿ ನಡೆಸಿದ ಪ್ರಯತ್ನವೆಲ್ಲವೂ ವ್ಯರ್ಥವಾಗಿದ್ದು ಸ್ಥಳೀಯ ಶಾಸಕರು ಕೂಡ ತನ್ನ ಅಹವಾಲನ್ನು ಆಲಿಸಲು ನಿರಾಕರಿಸಿದರೆಂದು ಮರುಗಿದ್ದಾರೆ.

ಬ್ಲೇಡಿನಿಂದ ನಾಲಗೆ ಕತ್ತರಿಸಿಕೊಂಡು ತೀವ್ರ ರಕ್ತಸ್ರಾವಕ್ಕೆ ಗುರಿಯಾಗಿದ್ದ ಈ ಹಿರಿಯ ನಾಗರಿಕ ವ್ಯಕ್ತಿಯನ್ನು ಒಡನೆಯೇ ಸಮಿಪದ ಆಸ್ಪತ್ರೆಗೆ ಒಯ್ಯಲಾಯಿತು. ಅಲ್ಲೀಗ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
-ಉದಯವಾಣಿ

Write A Comment