ರಾಷ್ಟ್ರೀಯ

ಮಿಲಿಟರಿ ಅಕಾಡೆಮಿಯಲ್ಲಿ ಹೆಚ್ಚಿದ ದೌರ್ಜನ್ ಯ: 16 ಜನ ಅಭ್ಯರ್ಥಿಗಳಿಗೆ ಹಿಂಬಡ್ತಿ

Pinterest LinkedIn Tumblr

miliಡೆಹ್ರಾಡೂನ್,ಏ.25- ಅಸಭ್ಯ ಚಟುವಟಿಕೆಗಳು ಹಾಗೂ ದೌರ್ಜನ್ಯ ಪ್ರಕರಣಗಳ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಭಾರತೀಯ ಸೇನಾ(ಮಿಲಿಟರಿ) ಅಕಾಡೆಮಿ ತರಬೇತಿ ಪಡೆಯುತ್ತಿರುವ 16 ಜನ ಅಭ್ಯರ್ಥಿಗಳಿಗೆ ಹಿಂಬಡ್ತಿ ನೀಡಿದೆ.

ತಮ್ಮ ಹಿಂದಿನ ಕಿರಿಯ ಅಭ್ಯರ್ಥಿಗಳನ್ನು ಥಳಿಸಿದ ಮತ್ತು ಆಕ್ಷೇಪಾರ್ಹ ಫೋಟೋಗಳನ್ನು ಪ್ರದರ್ಶಿಸಿದ ಆರೋಪದಲ್ಲಿ ಅಕಾಡೆಮಿ ಮುಖ್ಯಸ್ಥರು ಈ 16 ಜನರು ಮತ್ತೆ 6 ತಿಂಗಳ ಕಾಲ ಇದುವರೆಗೆ ಪಡೆದ ತರಬೇತಿಯನ್ನೇ ಪಡೆಯುವಂಥೇ ಆದೇಶಿಸಿದ್ದಾರೆ.

ಬರುವ ಜೂನ್ ತಿಂಗಳಿಗೆ ಈ ತಂಡದ ತರಬೇತಿ ಅವಧಿ ಮುಗಿಯಬೇಕಿತ್ತು. ಆದರೆ ಅಕಾಡೆಮಿ ನೀಡಿರುವ ಶಿಕ್ಷೆಯ ಹಿನ್ನೆಲೆಯಲ್ಲಿ ಈ 16 ಜನ ಡಿಸೆಂಬರ್‌ವರೆಗೂ ಅದೇ ತರಬೇತಿ ಪಡೆಯಬೇಕಿದೆ. ನಮ್ಮ ಈ ಕ್ರಮದಿಂದ ಮಿಲಿಟರಿ ಅಕಾಡೆಮಿ ನಡೆಸುವ ತರಬೇತಿ ಕೇಂದ್ರಗಳಿಗೆ ಸಂದೇಶವೊಂದನ್ನು ರವಾನಿಸಿದಂತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Write A Comment