ರಾಷ್ಟ್ರೀಯ

ಪ್ರತ್ಯೂಷಾಳ ಕೊನೆಯ ಕರೆಯನ್ನು ಸ್ವೀಕರಿಸಿದವರು ಯಾರು?

Pinterest LinkedIn Tumblr

pratyusha-759

ಮುಂಬೈ: ನಿಗೂಢವಾಗಿ ಆತ್ಮಹತ್ಯೆಗೆ ಶರಣಾಗಿದ್ದ ಕಿರುತೆರೆ ನಟಿ ಪ್ರತ್ಯೂಷಾ ಬ್ಯಾನರ್ಜಿ ಪ್ರಕರಣಕ್ಕೆ ಇದೀಗ ಇನ್ನೊಂದು ತಿರುವು ಸಿಕ್ಕಿದ್ದು, ಸಾವಿಗೆ ಕೆಲವೇ ಕ್ಷಣಗಳು ಬಾಕಿ ಇರುವಾಗ ಆಕೆ ಅಂತಿಮವಾಗಿ ಕಾಲ್ ಮಾಡಿದ ಮಾಹಿತಿ ಪೊಲೀಸರಿಗೆ ದೊರೆತಿದೆ.

ಮೂಲಗಳ ಪ್ರಕಾರ ಪ್ರತ್ಯೂಷಾ ಕೊನೆಯದಾಗಿ ತನ್ನ ಸ್ನೇಹಿತ ರಾಹುಲ್ ಬಳಿ ಮೂರು ನಿಮಿಷಗಳ ಕಾಲ ಮಾತನಾಡಿದರು, ಈ ಸಂದರ್ಭದಲ್ಲಿ ಭಾವುಕರಾಗಿದ್ದರು ಎಂದು ತಿಳಿದು ಬಂದಿದೆ. ಇಷ್ಟೇ ಅಲ್ಲ ಪ್ರತ್ಯೂಷಾ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸ್ವತಃ ರಾಹುಲ್​ಗೆ ತಿಳಿಸಿದ್ದರು ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಆರೋಪಿಸಿದ್ದಾರೆ. ವಿಧಿವಿಜ್ಞಾನ ವರದಿಯ ಪ್ರಕಾರ ಪ್ರತ್ಯೂಷಾ ಸಾವಿಗೂ ಮೊದಲು 135ಮಿ ಗ್ರಾಂ ಆಲ್ಕೋ ಹಾಲು ಸೇವಿಸಿದ್ದು, ತಮ್ಮ ಸ್ಥಿಮಿತ ಕಳೆದುಕೊಂಡಿದ್ದರು ಎಂದು ತಿಳಿಸಲಾಗಿದೆ.

ಪ್ರತ್ಯೂಷಾ ಈ ಮೊದಲು ಗರ್ಭಧರಿಸಿದ್ದರು ಎಂದು ವೈದ್ಯಕೀಯ ವರದಿ ತಿಳಿಸಿತ್ತು. ಎಪ್ರಿಲ್ ಒಂದರಂದು ಪ್ರತ್ಯೂಷಾ ತಮ್ಮ ಅಪಾರ್ಟ್​ವೆುಂಟ್​ನಲ್ಲಿನ ಫ್ಯಾನಿಗೆ ನೇಣು ಬಿಗಿದುಕೊಡು ಸಾವಿಗೆ ಶರಣಾಗಿದ್ದರು.

Write A Comment