ಅಂತರಾಷ್ಟ್ರೀಯ

15 ಮಿಲಿಯನ್ ಡಾಲರ್ ಬೆಲೆ ಬಾಳುವ ಬ್ರಿಟಿಶ್ ಮನೆಯಲ್ಲಿ ಮಲ್ಯ ಐಶಾರಾಮಿ ಜೀವನ

Pinterest LinkedIn Tumblr

vijay

ಲಂಡನ್: ಭಾರತೀಯ ಮದ್ಯ ದೊರೆ ವಿಜಯ್ ಮಲ್ಯ ದೇಶದ ವಿವಿಧ ಬ್ಯಾಂಕುಗಳಿಗೆ 9000 ಕೋಟಿ ಸಾಲ ಮಾಡಿ ಹಿಂದಿರುಗಿಸದೆ ಇದ್ದರು, ಅವರು ಇಂಗ್ಲೆಂಡಿನ ಹರ್ಟ್ ಫೋರ್ಡ್ ಶೈರ್ ಕೌಂಟಿಯ 15 ಮಿಲಿಯನ್ ಡಾಲರ್ ಬೆಲೆ ಬಾಳುವ ಅರಮನೆಯಲ್ಲಿ ವಾಸವಾಗಿದ್ದಾರೆ ಎಂದು ಸಂಡೆ ಟೈಮ್ಸ್ ವರದಿ ಮಾಡಿದೆ.

ದಿ ಫಾರ್ಮುಲಾ ಒನ್ ಚಾಂಪಿಯನ್ ಲ್ಯೂಯಿಸ್ ಹ್ಯಾಮಿಲ್ಟನ್ ಅವರ ತಂದೆಯವರಿಂದ ಈ ಮನೆಯನ್ನು ವಿದೇಶಿ ಸಂಸ್ಥೆಯೊಂದು ಕೊಂಡಿದೆ ಎಂದು ದಿನಪತ್ರಿಕೆ ವರದಿ ಮಾಡಿದೆ.

‘ದಿ ಕಿಂಗ್ ಆಫ್ ಗುಡ್ ಟೈಮ್ಸ್’ ಎಂದೆ ಕರೆಯಲಾಗುವ ೬೦ ವರ್ಷದ ಮದ್ಯ ದೊರೆ ಭಾರತ ತೊರೆದು ಬ್ರಿಟನ್ನಿಗೆ ಬಂದಿರುವುದರಿಂದ ಅವರ ವಿರುದ್ಧ ಕೋರ್ಟ್ ವಾರೆಂಟ್ ಹೊರಡಿಸಿದೆ.

ಈಗ ಭಾರತದ ವಿದೇಶಾಂಗ ಸಚಿವಾಲಯ ವಿಜಯ್ ಮಲ್ಯ ಅವರ ಪಾಸ್ಪೋರ್ಟ್ ವಜಾ ಮಾಡಿರುವುದರಿಂದ ಬ್ರಿಟನ್ ನಿಂದ ಅವರು ಗಡಿಪಾರಾಗುವ ಸಾಧ್ಯತೆ ಹೆಚ್ಚಿದೆ. ಈಮಧ್ಯೆ ಮಲ್ಯ ಹೆಸರು ಅಲ್ಲಿನ ಮತದಾರರ ಪಟ್ಟಿಯಲ್ಲಿರುವುದನ್ನು ಕೂಡ ಪತ್ರಿಕೆ ವರದಿ ಮಾಡಿದೆ.

Write A Comment