ಅಂತರಾಷ್ಟ್ರೀಯ

ಮೆದುಳಿಗೊಂದು ಸ್ಮಾರ್ಟ್ ಕ್ಯಾಪ್

Pinterest LinkedIn Tumblr

2121

ತಲೆ ಬುರುಡೆಯೊಳಗಿನ ಪುಟ್ಟ ಮೆದುಳು ಅಚ್ಚರಿ, ವಿಸ್ಮಯಗಳಲ್ಲಿ ಒಂದು. ಮೆದುಳಿನ ಕಾರ್ಯವೈಖರಿಯನ್ನು ಸಮಗ್ರವಾಗಿ ಅರಿಯಲು ಇಂದಿಗೂ ಸಾಧ್ಯವಾಗಿಲ್ಲ. ಇದು ವೈದ್ಯಲೋಕಕ್ಕೆ ಸವಾಲು ಸೃಷ್ಠಿಸಿದೆ.

ಇಂತಹ ಮೆದುಳನ್ನು ಪ್ರಯೋಗ ವಸ್ತುವನ್ನಾಗಿಸಿಕೊಂಡು ನಡೆದಿರುವ ಸಂಶೋಧನೆಗಳು ಸಹಸ್ರಾರು.

ಇದೀಗ ವೈದ್ಯಲೋಕವನ್ನು ನಿಬ್ಬೆರಗುಗೊಳಿಸುವ ಮೆದುಳಿನ ರೋಗಗಳ ಲಕ್ಷಣಗಳನ್ನು ಕಂಡು ಹಿಡಿಯುವ ಪ್ರಯತ್ನಗಳು ನಡೆದಿವೆ. ಇಂತಹ ಪ್ರಯತ್ನದಲ್ಲಿ ವಾಷಿಂಗ್‌ಟನ್ ಯುನಿವರ್ಸಿಟಿ ಸ್ಕೂಲ್ ಆಫ್ ಮೆಡಿಸನ್ ಸಂಸ್ಥೆ ಯಶಸ್ವಿಯಾಗಿದೆ..

ಸೆಂಟ್ ಲೂಯಿಸ್‌ನಲ್ಲಿ ಪ್ರಯೋಗಾಲಯ ಹೊಂದಿರುವ ಈ ಸಂಸ್ಥೆ ಮೆದುಳಿನ ಮೇಲ್ವಿಚಾರಣೆಯ ಮೂಲಕ ಮನೋರೋಗದ ಕ್ಷಣಗಳನ್ನು ಪತ್ತೆ ಮಾಡುವ ‘ಸ್ಮಾರ್ಟ್ ಕ್ಯಾಪ್’ ಅನ್ನು ಸಂಶೋಧಿಸಿದೆ.

ಮೆದುಳಿನ ಮನೋರೋಗಗಳಿಗೆ ಚಿಕಿತ್ಸೆ ನೀಡಲು ಉಪಯೋಗವಾಗುವ ಈ ಕ್ಯಾಪ್ ಹೆಸರು ‘ಡಾಟ್.’

ಡಾಟ್ ಎಂದರೆ, ‘ಡಿಪ್ಯೂಸ್ ಆಫ್ಟಿಕಲ್ ಟೋಮೋಗ್ರಪಿ.’ ಈ ಸ್ಮಾರ್ಟ್ ಕ್ಯಾಪ್‌ನಲ್ಲಿ ಸಣ್ಣದಾದ ಎಲ್‌ಇಡಿ ಬಲ್ಬ್‌ಗಳನ್ನು ಅಳವಡಿಸಲಾಗಿದೆ. ತಲೆ ಮೂಲಕ ಬೆಳಕು ಹಾದು ಹೋದಾಗ ಮೆದುಳಿನ ಕಾರ್ಯಾಚರಣೆಯಲ್ಲಿನ ಪ್ರಮುಖ ಬದಲಾವಣೆಗಳನ್ನು ಸೆರೆಹಿಡಿಯುತ್ತದೆ.

ಇದರಿಂದಾಗಿ ನರಮಂಡಲದ ಅಸ್ವಸ್ತತೆ ಹಗಲುಗನಸು, ಮೆದುಳಿನ ಜ್ಞಾಪಕ ಶಕ್ತಿ ಮುಂತಾದ ಮಾಹಿತಿಯನ್ನು ಪಡೆಯಬಹುದು.

ಈ ಸ್ಮಾರ್ಟ್ ಕ್ಯಾಪ್ ಬಹಳ ಹಗುರ ರೋಗಿಗಳು ಎಲ್ಲೆಂದರಲ್ಲಿ ಕೊಂಡೊಯ್ಯಬಹುದು ಎಂಆರ್‌ಐ ಹಾಗೂ ಇನ್ನಿತರ ಸ್ಕ್ಯಾನಿಂಗ್‌ಗಳಲ್ಲಿ ಬಳಸುವಂತಹ ವಿಕಿರಣ ಮತ್ತು ಆಯಸ್ಕಾಂತಗಳ ಅವಶ್ಯಕತೆ ಈ ಸ್ಮಾರ್ಟ್ ಕ್ಯಾಪ್‌ಗೆ ಇಲ್ಲ.

ವಿಮಾನ ಚಾಲನೆ ಮಾಡುವ ಪೈಲಟ್‌ಗಳಿಗೂ ಬಳಸುವಂತಹ ಕ್ಯಾಪ್‌ನ್ನು ಜರ್ಮನಿ ತಂತ್ರಜ್ಞಾನ ವಿಶ್ವವಿದ್ಯಾಲಯ ಕಂಡು ಹಿಡಿದಿದೆ.

ಈ ಕ್ಯಾಪ್‌ನಲ್ಲಿ ಬಳಸಲಾಗಿರುವ ವಿದ್ಯುತ್ವಾಹಕ ಮೆದುಳಿನ ತರಂಗಗಳನ್ನು ಸಂಕೇತಗಳನ್ನಾಗಿ ಪರಿವರ್ತಿಸಿ ಕಂಪ್ಯೂಟರಿಗೆ ರವಾನಿಸುತ್ತದೆ.
ಮೆದುಳಿನ ಜಾಲಗಳನ್ನು ಗ್ರಹಿಸುವ ಇಂತಹ ತಂತ್ರಜ್ಞಾನಗಳನ್ನು ಹೆಚ್ಚಿನ ಪರೀಕ್ಷೆಗೆ ಒಳಪಡಿಸುವ ಅವಶ್ಯಕತೆ ಇದೆ ಎನ್ನುತ್ತಾರೆ ಸಂಶೋಧಕರು.

Write A Comment