ರಾಷ್ಟ್ರೀಯ

ಬಂಡಾಯ ಶಾಸಕರ ಅರ್ಜಿ ವಜಾ, ಹೈಕೋರ್ಟ್​ಗೆ ಸ್ಪೀಕರ್ ಕೋರಿಕೆ

Pinterest LinkedIn Tumblr

23-uttarakhand-high-court-webನೈನಿತಾಲ್: ವಿಧಾನಸಭೆಯಿಂದ ತಮ್ಮನ್ನು ಅನರ್ಹಗೊಳಿಸಿರುವುದನ್ನು ಪ್ರಶ್ನಿಸಿ 9 ಮಂದಿ ಕಾಂಗ್ರೆಸ್ ಶಾಸಕರು ಸಲ್ಲಿಸಿದ ಅರ್ಜಿಯನ್ನು ವಜಾ ಮಾಡಬೇಕು ಎಂದು ಉತ್ತರಾಖಂಡ ವಿಧಾನಸಭಾಧ್ಯಕ್ಷರು ಶನಿವಾರ ಹೈಕೋರ್ಟ್​ನಲ್ಲಿ ವಾದಿಸಿದರು. ಒಂಬತ್ತೂ ಮಂದಿ ಕಾಂಗ್ರೆಸ್ ಶಾಸಕರು ಪಕ್ಷಾಂತರ ನಿಷೇಧ ಕಾಯ್ದೆಯನ್ನು ಉಲ್ಲಂಘಿಸಿದ್ದು, ಶಿಕ್ಷೆಗೆ ಅರ್ಹರಾಗಿದ್ದಾರೆ ಎಂದು ಅವರು ಪ್ರತಿಪಾದಿಸಿದರು.

ವಿಧಾನಸಭಾಧ್ಯಕ್ಷ ಗೋವಿಂದ ಸಿಂಗ್ ಕುಂಜ್ವಲ್ ಅವರ ಪರವಾಗಿ ಹೈಕೋರ್ಟಿನಲ್ಲಿ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು, ‘9 ಶಾಸಕರು ಬಿಜೆಪಿ ಹೋದದ್ದು ಹೇಗೆ ಮತ್ತು ಸಂವಿಧಾನದ 10ನೇ ಷೆಡ್ಯೂಲನ್ನು ಉಲ್ಲಂಘಿಸಿದ್ದಾರೆಯೇ ಎಂಬುದು ಪ್ರಶ್ನೆ. ಅವರು 10ನೇ ಷೆಡ್ಯೂಲನ್ನು ಉಲ್ಲಂಘಿಸಿದ್ದರೆ, ತಮ್ಮ ಅನರ್ಹತೆಗೆ ತಡೆಯಾಜ್ಞೆ ನೀಡುವಂತೆ ಅವರು ಹೇಗೆ ಕೇಳಲು ಸಾಧ್ಯ?’ ಎಂದು ಕೇಳಿದರು.

ಉತ್ತರಾಖಂಡ ಹೈಕೋರ್ಟಿನ ವಿಭಾಗೀಯ ಪೀಠದ ತೀರ್ಪಿನಂತೆ ಅವರು ಸಂವಿಧಾನಬದ್ಧವಾಗಿ ಪಕ್ಷಾಂತರದ ಅಪರಾಧ ಎಸಗಿರುವಾಗ ಅನರ್ಹತೆಗೆ ತಡೆಯಾಜ್ಞೆ ಕೋರಲು ಹೇಗೆ ಸಾಧ್ಯ? ತಾವು ಮಾಡಿರುವುದು ಅನೈತಿಕ ಮತ್ತು ಸಂವಿಧಾನ ಬಾಹಿರ ಎಂಬುದು ಅವರಿಗೆ ಗೊತ್ತಿದೆ ಎಂದು ಸಿಬಲ್ ಅವರು ನ್ಯಾಯಮೂರ್ತಿ ಯುಸಿ ಧ್ಯಾನಿ ಅವರ ಪೀಠದ ಮುಂದೆ ವಾದಿಸುತ್ತಾ ಹೇಳಿದರು.

Write A Comment