ರಾಷ್ಟ್ರೀಯ

ಆಹಾರ ಧಾನ್ಯ ಕೊರತೆ ಇಲ್ಲ: ಪಾಸ್ವಾನ್

Pinterest LinkedIn Tumblr

0glc8b25ಜೈಪುರ(ಪಿಟಿಐ): ಕೆಲವು ರಾಜ್ಯಗಳಲ್ಲಿ ಬರ ಪರಿಸ್ಥಿತಿ ಇದ್ದರೂ, ಈ ವರ್ಷಕ್ಕೆ ಸಾಕಾಗುವಷ್ಟು ಆಹಾರ ಧಾನ್ಯಗಳ ಸಂಗ್ರಹ ಭಾರತೀಯ ಆಹಾರ ನಿಗಮದ (ಎಫ್‌ಸಿಐ) ಬಳಿ ಇದೆ ಎಂದು ಆಹಾರ ಸಚಿವ ರಾಮ್‌ವಿಲಾಸ್‌ ಪಾಸ್ವಾನ್‌ ಶನಿವಾರ ಇಲ್ಲಿ ಹೇಳಿದ್ದಾರೆ.

ದೇಶದಲ್ಲಿ ವರ್ಷವೊಂದಕ್ಕೆ 549 ಟನ್‌ ಆಹಾರ ಧಾನ್ಯಗಳ ಬೇಡಿಕೆ ಇದ್ದು, ಈಗಾಗಲೇ ಎಫ್‌ಸಿಐ ಬಳಿ 600 ಟನ್‌ ಸಂಗ್ರಹ ಇದೆ. ಇದಲ್ಲದೆ ಹೆಚ್ಚುವರಿ ಬೇಳೆಕಾಳುಗಳ ಸಂಗ್ರಹಕ್ಕೆ ಎಫ್‌ಸಿಐ ಮುಂದಾಗಿದೆ. ಒಟ್ಟು 2 ಲಕ್ಷ/ಮೆಟ್ರಿಕ್ ಟನ್‌ ಬೇಳೆ ಕಾಳು ಸಂಗ್ರಹಿಸುವ ಗುರಿ ಇದ್ದು, ಈಗಾಗಲೇ 50 ಸಾವಿರ ಟನ್‌ ಸಂಗ್ರಹಿಸಲಾಗಿದೆ. 25 ಸಾವಿರ ಟನ್‌ ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

ಬೇಡಿಕೆ ಇರುವಲ್ಲಿ ಬೇಳೆಕಾಳು ದಾಸ್ತಾನು ಮಾಡುವಂತೆ ರಾಜ್ಯಗಳಿಗೆ ಸೂಚನೆಯನ್ನೂ ನೀಡಲಾಗಿದೆ. ವರ್ಷಕ್ಕೆ 235 ಲಕ್ಷ/ಮೆಟ್ರಿಕ್ ಟನ್‌ ಬೇಳೆಕಾಳು ಅಗತ್ಯವಿದ್ದು, 170 ಲಕ್ಷ/ಮೆಟ್ರಿಕ್ ಟನ್ ಉತ್ಪಾದನೆ ನಿರೀಕ್ಷೆ ಇದೆ ಎಂದು ಅವರು ಮಾಹಿತಿ ನೀಡಿದರು.

ಪ್ರಸ್ತುತ ಇರುವ ದಾಸ್ತಾನು ಪರಿಶೀಲಿಸಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ರಾಜ್ಯಗಳಿಗೆ ಸೂಚಿಸಲಾಗಿದೆ ಎಂದರು.

Write A Comment