ರಾಷ್ಟ್ರೀಯ

ಭಾರತದಲ್ಲಿ ಐಫೋನ್‌ ಇನ್ನಷ್ಟು ತುಟ್ಟಿ: ಬೆಲೆ ಶೇ 29ರಷ್ಟು ಏರಿಕೆ

Pinterest LinkedIn Tumblr

iphonewebನವದೆಹಲಿ: ಐಫೋನ್‌ ಪ್ರಿಯರಿಗೆ ಕಹಿ ಸುದ್ದಿ. ಭಾರತದ ಮಾರುಕಟ್ಟೆಯಲ್ಲಿ ‘ಐಫೋನ್‌–6’ ದರವನ್ನು ಆ್ಯಪಲ್‌ ಕಂಪೆನಿ ಶೇ 29ರಷ್ಟು ಹೆಚ್ಚಿಸಿದೆ.

ಇತ್ತೀಚೆಗೆ ಬಿಡುಗಡೆಯಾದ ‘ಐಪೋನ್‌ ಎಸ್‌ಇ’ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವೇ ಸಾವಿರ ಸಂಖ್ಯೆಯಲ್ಲಿ ಹ್ಯಾಂಡ್‌ಸೆಟ್‌ಗಳು ಮಾರಾಟವಾಗಿವೆ. ಹೀಗಿದ್ದರೂ, ಐಪೋನ್‌–6 ದರವನ್ನು ಮಾರುಕಟ್ಟೆ ನಿರೀಕ್ಷೆ ಮೀರಿ ಹೆಚ್ಚಿರುವುದು ಅಚ್ಚರಿಗೆ ಕಾರಣವಾಗಿದೆ.

ಐಫೋನ್‌ ಖರೀದಿಯ ಮೇಲೆ 2016ರ ಜನವರಿ–ಮಾರ್ಚ್‌ ಅವಧಿಯಲ್ಲಿ ನೀಡಲಾಗಿದ್ದ ಕೆಲವು ರಿಯಾಯ್ತಿ ಕೊಡುಗೆಗಳನ್ನು ವಾಪಸ್‌ ಪಡೆಯಲು ಕಂಪೆನಿ ನಿರ್ಧರಿಸಿದೆ ಎಂದು ಮೂಲಗಳು ಹೇಳಿವೆ.

ಸದ್ಯ 16 ಜಿಬಿ ಸಾಮರ್ಥ್ಯದ, 4 ಇಂಚಿನ ಸ್ಪರ್ಶ ಪರದೆಯ ‘ಐಫೋನ್‌ ಎಸ್‌ಇ’ ಮಾದರಿಗೆ ₹39 ಸಾವಿರ ದರ ಇದೆ. 16 ಜಿಬಿ ಸಾಮರ್ಥ್ಯದ ‘ಐಫೋನ್‌ 6’ ಮಾದರಿ ₹31 ಸಾವಿರಕ್ಕೆ ಲಭಿಸುತ್ತದೆ. ಐಫೋನ್‌–6ಎಸ್‌ ಮಾದರಿಗೆ ₹40,500 ಬೆಲೆ ಇದೆ.

ಬೆಲೆ ಏರಿಕೆಯ ನಂತರ ಐಪೋನ್‌–6 ಮಾದರಿ ₹9 ಸಾವಿರದಷ್ಟು ತುಟ್ಟಿಯಾಗಲಿದ್ದು, ಗ್ರಾಹಕರು ₹40 ಸಾವಿರ ತೆತ್ತಬೇಕು. ಐಫೋನ್‌6–ಎಸ್‌ ಮಾದರಿ ಬೆಲೆ ₹48 ಸಾವಿರಕ್ಕೆ ಏರಿಕೆಯಾಗಲಿದೆ.

Write A Comment