ರಾಷ್ಟ್ರೀಯ

ಲವಲವಿಕೆಯಿಂದ ಎಂ.ಎ ಪರೀಕ್ಷೆ ಬರೆದ 97ರ ವೃದ್ಧ !

Pinterest LinkedIn Tumblr

Raj-kumar-Ajjaಪಟ್ನಾ: 1938ರಲ್ಲಿ ಪದವಿ ಮುಗಿಸಿದ್ದ ರಾಜ್ ಕುಮಾರ್ ವೈಶ್ಯ ನಳಂದ ವಿಶ್ವವಿದ್ಯಾಲಯದಲ್ಲಿ ಎಂ.ಎ ಪರೀಕ್ಷೆ ಬರೆದಿದ್ದಾರೆ.

ಪ್ರಥಮ ಪರೀಕ್ಷೆ ಅರ್ಥಶಾಸ್ತ್ರವನ್ನು 23 ಹಾಳೆಗಳನ್ನು ಪಡೆದು ಇಂಗ್ಲೀಷ್​ನಲ್ಲಿ ಮಾಧ್ಯಮದಲ್ಲಿ ಬರೆದಿದ್ದಾರೆ. ಪರೀಕ್ಷಾ ಕೊಠಡಿಯಲ್ಲಿ ತನ್ನ ಮೊಮ್ಮಕ್ಕಳ ಪ್ರಾಯದ ವಿದ್ಯಾರ್ಥಿಗಳೊಡನೆ ಎಲ್ಲರಂತೆ ಮೂರು ಗಂಟೆ ಕುಳಿತು ಪರೀಕ್ಷೆ ಮುಗಿಸಿದ್ದಾರೆ.

ವೈಶ್ಯ ಅವರು ಮುಖ್ಯವಾಗಿ ಎರಡು ಕಾರಣಗಳಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮಾಡುತಿದ್ದಾರಂತೆ. ಮೊದಲನೆಯದಾಗಿ ಸ್ನಾತಕೋತ್ತರ ಪದವಿ ಮಾಡಬೇಕು ಎನ್ನುವ ಅವರ ಕನಸನ್ನು ನನಸು ಮಾಡಲು ಮತ್ತು ಭಾರತ ಬಡತನ ಮುಂತಾದ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಯಾಕಾಗಿ ವಿಫಲವಾಯಿತು ಎಂದು ತಿಳಿದುಕೊಳ್ಳಲು.

‘‘ನಾನು ಮೊದಲ ಪರೀಕ್ಷೆಗೆ ಹಾಜರಾಗಿದ್ದೇನೆ. ನನ್ನ ಕನಸನ್ನು ನನಸು ಮಾಡಲು ಇನ್ನು ಕೆಲವೇ ಹೆಜ್ಜೆಗಳು ಬಾಕಿ ಇವೆ’’ ಎಂದು ರಾಜ್ ಕುಮಾರ್ ವೈಶ್ಯ ಹೇಳಿದ್ದಾರೆ.

1920 ಏಪ್ರೀಲ್ 1ರಂದು ಉತ್ತರ ಪ್ರದೇಶದಲ್ಲಿ ಜನಿಸಿದ್ದ ರಾಜ್ ಕುಮಾರ್ ವೈಶ್ಯ ಖಾಸಗಿ ಕಂಪೆನಿಯೊಂದರಲ್ಲಿ ಜನರಲ್ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸಿದ್ದು 1980ರಲ್ಲಿ ನಿವೃತ್ತಿ ಹೊಂದಿದ್ದರು.

Write A Comment