ರಾಷ್ಟ್ರೀಯ

ವರ ಕಪ್ಪಗಿದ್ದಾನೆ ಎಂದು ಮದುವೆ ನಿರಾಕರಿಸಿದ ಸಹೋದರಿಯರು !

Pinterest LinkedIn Tumblr

marrage2

ಆಗ್ರಾ: ಮದುವೆಯಾಗುವ ಹುಡುಗನ ಮನೆಯಲ್ಲಿ ಶೌಚಾಲಯವಿಲ್ಲ, ಗಂಡು ವರದಕ್ಷಿಣೆ ಕೇಳಿದ ಎಂಬ ಕಾರಣದಿಂದ ವರನಿಗೆ ನೋ ಹೇಳಿ ಮದುವೆಯನ್ನು ನಿಲ್ಲಿಸಿದ ವಧುಗಳ ಬಗ್ಗೆ ಕೇಳಿದ್ದೀವಿ. ಆದರೆ ಇಲ್ಲಿ ಮದುಮಗ ತುಂಬಾ ಕಪ್ಪಗಿದ್ದಾನೆ ಎಂದು ಹೇಳಿ ಇಬ್ಬರು ಮದುವಣಗಿತ್ತಿಯರು ಮದುವೆ ನಿರಾಕರಿಸಿರುವ ಘಟನೆ ಸಿಕ್ರಾರಾ ಗ್ರಾಮದಲ್ಲಿ ನಡೆದಿದೆ.

15 ಮತ್ತು 16ರ ಹರೆಯದ ಇಬ್ಬರು ಅಪ್ರಾಪ್ತ ಹೆಣ್ಮಕ್ಕಳಿಗೆ ಮದುವೆ ನಿಗದಿಯಾಗಿತ್ತು. ಆದರೆ ತಾಳಿ ಕಟ್ಟಿಸಿಕೊಳ್ಳಲು ಕೆಲವೇ ಕ್ಷಣ ಬಾಕಿ ಉಳಿದಿರುವ ವೇಳೆ ಇವರಿಬ್ಬರೂ ಹುಡುಗ ಕಪ್ಪಗಿದ್ದಾನೆ ಅವನನ್ನು ಮದುವೆಯಾಗಲಾರೆವು ಎಂದು ಹೇಳಿ ಮಂಟಪದಿಂದ ಕೆಳಗಿಳಿದಿದ್ದಾರೆ.

ಹದಿಹರೆಯದ ಈ ಮದುವಣಗಿತ್ತಿಯರು ಸಹೋದರಿಯರಾಗಿದ್ದು, ಕುಟುಂಬದವರು ಬಲವಂತ ಮಾಡಿ ಮದುವೆ ನಡೆಸಲು ಸಿದ್ಧತೆ ನಡೆಸಿದ್ದರು. ಇವರಿಬ್ಬರಿಗೆ 25 ಮತ್ತು 20 ವರ್ಷದ ಇಬ್ಬರು ಗಂಡುಗಳನ್ನು ನೋಡಿ ಮದುವೆ ನಿಶ್ಚಯ ಮಾಡಲಾಗಿತ್ತು. ದೇವಮಾನವನೊಬ್ಬ ಅಭಿಪ್ರಾಯ ಕೇಳಿ ಈ ಹೆಣ್ಮಕ್ಕಳ ಮದುವೆಯನ್ನು ಮಾಡಲು ಅವರ ಕುಟುಂಬ ತೀರ್ಮಾನಿಸಿತ್ತು.

ಇನ್ನೇನು ತಾಳಿ ಕಟ್ಟಬೇಕು ಎನ್ನುವ ಹೊತ್ತಲ್ಲಿ ಈ ಇಬ್ಬರು ಸಹೋದರಿಯರು ತಮಗೆ ಮದುವೆ ಬೇಡ ಎಂದಿದ್ದಾರೆ. ಅಷ್ಟೇ ಅಲ್ಲದೆ ಇನ್ನು ಬಲವಂತ ಮಾಡಿದರೆ ಪೊಲೀಸ್ ಗೆ ದೂರು ನೀಡುತ್ತೇವೆ ಎಂದು ಹೇಳಿ ಈ ಸಹೋದರಿಯರು ಮದುವೆ ನಿಲ್ಲಿಸಿದ್ದಾರೆ.

Write A Comment