ರಾಷ್ಟ್ರೀಯ

2050ಕ್ಕೆ ಕುಡಿಯುವ ನೀರೂ ಆಮದು ಸಾಧ್ಯತೆ!

Pinterest LinkedIn Tumblr

waterನವದೆಹಲಿ: ದೇಶದ ಅಂತರ್ಜಲಮಟ್ಟ ಗಣನೀಯ ಪ್ರಮಾಣದಲ್ಲಿ ಕುಸಿಯುತ್ತಿದ್ದು, 2050ರ ವೇಳೆಗೆ ಕುಡಿಯುವ ನೀರನ್ನೂ ಆಮದು ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದೀತು ಎಂಬ ಆತಂಕಕಾರಿ ವಿಚಾರವನ್ನು ಕೇಂದ್ರ ಅಂತರ್ಜಲ ಮಂಡಳಿ ವರದಿಯಿಂದ ಬಹಿರಂಗಗೊಂಡಿದೆ.

2001ರಿಂದ ಈವರೆಗಿನ ಲೆಕ್ಕಾಚಾರದ ಪ್ರಕಾರ ದೇಶದ ತಲಾ ಅಂತರ್ಜಲ (ದಿನವೊಂದಕ್ಕೆ) ಪ್ರಮಾಣ 5,120 ಲೀಟರ್​ಗೆ ಇಳಿಕೆಯಾಗಿದೆ. 1951ರಲ್ಲಿ ಇದು 14,180 ಲೀಟರ್ ಇತ್ತು. 2025ರ ವೇಳೆಗೆ ತಲಾ ಅಂತರ್ಜಲ ಲಭ್ಯತೆ ಪ್ರಮಾಣ ಕೇವಲ ಶೇ. 25 ಇರಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಭವಿಷ್ಯದಲ್ಲಿ ಉದ್ಭವಿಸಬಹುದಾದ ನೀರಿನ ಅಭಾವ ತಡೆಗಟ್ಟಲು ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕಾದ ಅವಶ್ಯಕತೆಯಿದೆ. ಮಳೆ ನೀರು ಕೊಯ್ಲು ಮತ್ತಿತರ ವಿಧಾನಗಳ ಮೂಲಕ ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ. ಜನರಲ್ಲಿ ಅರಿವು ಮೂಡಿಸುವ ಕಾರ್ಯ ಆಗಬೇಕಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Write A Comment