ರಾಷ್ಟ್ರೀಯ

ನಿತೀಶ್ ನನ್ನ ತಮ್ಮ ಇದ್ದಂತೆ,ಅವರು ಪ್ರಧಾನಿಯಾದರೆ ನನಗೆ ಅತೀವ ಸಂತಸ : ಲಾಲೂ

Pinterest LinkedIn Tumblr

laaluಮುಂಬರುವ 2019ರ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾಪಕ್ಷ (ಬಿಜೆಪಿ)ವನ್ನು ಮಟ್ಟ ಹಾಕಲು ರಾಷ್ಟ್ರಮಟ್ಟದಲ್ಲಿ ಮಹಾಕೂಟವೊಂದನ್ನು ರಚಿಸಲು ಮುಖ್ಯಮಂತ್ರಿ ನಿತೀಶ್ ಕುಮಾರ್ ತೀವ್ರ ಪ್ರಯತ್ನ ನಡೆಸಿರುವ ಮಧ್ಯೆಯೇ, ನಿತೀಶ್ ಕುಮಾರ್ ನನ್ನ ಕಿರಿಯ ಸಹೋದರನಾಗಿದ್ದು, ನನ್ನ ತಮ್ಮ , ಭಾರತದ ಮುಂದಿನ ಪ್ರಧಾನಿಯಾದರೆ ನನಗೆ ಭಾರೀ ಸಂತಸವಾಗಲಿದೆ ಎಂದು ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಹೇಳಿದ್ದಾರೆ.

ತಮ್ಮ ಪುತ್ರ ಹಾಗೂ ಬಿಹಾರ ಸಾರಿಗೆ ಸಚಿವ ತೇಜಸ್ವಿ ಯಾದವ್ ಜೊತೆ ಇಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತ ನಾಡಿದ ಲಾಲೂ, ಮತೀಯವಾದಿಗಳನ್ನು ಸೋಲಿಸಲು ತಾವು ಬಿಹಾರದಲ್ಲಿ ಸಂಯುಕ್ತ ಜನತಾದಳ(ಜೆಡಿಯು)ದೊಂದಿಗೆ ಕೈ ಜೋಡಿಸುವುದಾಗಿ ತಿಳಿಸಿದರು.

ನಾವೆಲ್ಲರೂ ಸಂಘ ಪರಿವಾರದ ಶಕ್ತಿಗಳ ವಿರುದ್ದ ಒಗ್ಗೂಡುವ ಅಗತ್ಯವಿದೆ. ಇಲ್ಲವಾದರೆ ಈ ದೇಶ ಹರಿದು ಹಂಚಾಗಲಿದೆ ಎಂದರು. ಆರ್‌ಎಸ್‌ಎಸ್ ಮುಕ್ತ ಭಾರತದ ನಿತೀಶ್ ಅವರ ಅಭಿಯಾನವನ್ನು ಬೆಂಬಲಿಸಿದ ಲಾಲೂ, ಮುಖ್ಯಮಂತ್ರಿ ನಿತೀಶ್ ನನ್ನ ಕಿರಿಯ ಸಹೋದರನೇ ಇದ್ದಂತೆ ಒಂದು ವೇಳೆ ನಿತೀಶ್ ಪ್ರಧಾನಿಯಾದರೆ ನನಗೆ ಅತ್ಯಂತ ಹರ್ಷವಾಗುತ್ತದೆ ಎಂದರು. ಅವರು ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದರು.

Write A Comment