ರಾಷ್ಟ್ರೀಯ

ಹೈದರಾಬಾದ್ ಮೂಲದ ವ್ಯಕ್ತಿ ಲಂಡನ್’ನಲ್ಲಿ ಅನುಮಾನಾಸ್ಪದ ಸಾವು

Pinterest LinkedIn Tumblr

Hyderabad-londonಹೈದರಾಬಾದ್ (ತೆಲಂಗಾಣ); ಹೈದರಾಬಾದ್ ಮೂಲದ ಭಾರತೀಯ ವ್ಯಕ್ತಿ ಲಂಡನ್ ನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.
ಮಿರ್ ಬಕಾರ್ ರಿಜ್ವಿ (34) ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಭಾರತೀಯ ವ್ಯಕ್ತಿಯಾಗಿದ್ದು, ಶಿಕ್ಷಣ ವೀಸಾ ಮೂಲದ 2009ರಲ್ಲಿ ಲಂಡನ್ ಗೆ ಹೋಗಿದ್ದ ಎಂದು ರಿಜ್ವಿ ಸಹೋದರ ಹೇಳಿಕೊಂಡಿದ್ದಾರೆ.
ಮೂರು ವರ್ಷದ ಹಿಂದೆ ರಿಜ್ವಿ ಲಂಡನ್ ನಲ್ಲಿ ಅಪಘಾತಕ್ಕೀಡಾಗಿದ್ದ. ಚಿಕಿತ್ಸೆ ಪಡೆದ ಬಳಿಕ 2014ರಲ್ಲಿ 45 ದಿನಗಳ ಕಾಲ ಭಾರತಕ್ಕೆ ಬಂದಿದ್ದ. ನಂತರ ಲಂಡನ್ ಮತ್ತೆ ಹೋಗಿದ್ದ. ಇದಾದ ಕೆಲವು ದಿನಗಳ ಬಳಿಕ ಲಂಡನ್ ನ್ಯಾಯಾಲಯದಲ್ಲಿ ರಿಜ್ವಿ ವಿರುದ್ಧವೇ ಅರ್ಜಿಯೊಂದು ಸಲ್ಲಿಸಲಾಗಿತ್ತು. ವಿಚಾರಣೆ ನಂತರ ರಿಜ್ವಿ ಪ್ರಕರಣದಲ್ಲಿ ಜಯಗಳಿಸಿದ್ದ ಎಂದು ರಿಜ್ವಿ ಸಹೋದರ ಹೈದರ್ ಹೇಳಿಕೊಂಡಿದ್ದಾರೆ.
ಇನ್ನು ಏಪ್ರಿಲ್. 14 ಸಹೋದರನೊಬ್ಬನ ಆರತಕ್ಷತೆ ಇದ್ದರಿಂದ ರಿಜ್ವಿ ಫೋನಿನ ಮೂಲಕ ಶುಭಾಶಯ ಕೋರಿದ್ದ. ಶುಭಾಶಯ ಕೋರಿದ ಮರುದಿನವೇ ಪೊಲೀಸರು ನಮಗೆ ಕರೆ ಮಾಡಿ ರಿಜ್ವಿ ಸಾವನ್ನಪ್ಪಿದ್ದಾನೆಂದು ಮಾಹಿತಿ ನೀಡಿದ್ದರು ಎಂದು ಹೇಳಿದ್ದಾರೆ.
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಕೂಡಲೇ ಪ್ರಕರಣ ಸಂಬಂಧ ಗಮನ ಹರಿಸಬೇಕು. ನಮಗೆ ನ್ಯಾಯವನ್ನು ಒದಗಿಸಬೇಕು ಹಾಗೂ ರಿಜ್ವಿ ಮೃತದೇಹವನ್ನು ಶೀಘ್ರಗತಿಯಲ್ಲಿ ನಮ್ಮ ವಶಕ್ಕೆ ನೀಡಬೇಕೆಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.
ಮೂಲಗಳ ಪ್ರಕಾರ ಮಿರ್ ಬಕಾರ್ ರಿಜ್ವಿ ಲಂಡನ್ ನಲ್ಲಿ ಎಂಬಿಎ ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದು, ಏ.12 ರಂದು ಲಂಡನ್ ನ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಆಸ್ಟರ್ಲಿ ಭೂಗರ್ಭ ರೈಲ್ವೆ ನಿಲ್ದಾಣದಲ್ಲಿ ಸಿಲುಕಿ ಹಾಕಿಕೊಂಡ ಕಾರಣ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.
ಇನ್ನು ಈ ಕುರಿತಂತೆ ಲಂಡನ್ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದ್ದು, ರಿಜ್ವಿ ಅವರ ಸಾವು ಅನುಮಾನಾಸ್ಪದ ಸಾವಲ್ಲ. ಅವರು ಭೂಗರ್ಭ ರೈಲ್ವೆ ನಿಲ್ದಾಣದಲ್ಲಿ ಸಿಲುಕಿ ಹಾಕಿಕೊಂಡು ಸಾವನ್ನಪ್ಪಿದ್ದಾರೆ. ರಿಜ್ವಿ ಸಾವಿನ ಹಿಂದೆ ಯಾವುದೇ ಮೂರನೇ ವ್ಯಕ್ತಿ ಕೈವಾಡವಿಲ್ಲ ಎಂದು ಹೇಳಿಕೊಂಡಿದೆ.
ಏಪ್ರಿಲ್ 12ರಂದು ರಾತ್ರಿ 7.45ರ ಸುಮಾರಿಗೆ ಲಂಡನ್ ನ ಆಸ್ಟರ್ಲಿ ಭೂಗರ್ಭ ರೈಲ್ವೇ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರನ್ನು ಸಿಕ್ಕಿಹಾಕಿಕೊಂಡಿದ್ದಾರೆಂದು ಕರೆ ಬಂದಿತ್ತು. ಈ ವೇಳೆ ಪೊಲೀಸರು, ಆಂಬ್ಯುಲೆನ್ಸ್ ಜೊತೆಗೆ ಅಗ್ನಿ ಶಾಮಕ ದಳದೊಂದಿಗೆ ಸ್ಥಳಕ್ಕೆ ಹೋಗಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ, ಅಷ್ಟರಲ್ಲಾಗಲೇ ಆ ವ್ಯಕ್ತಿ ಸಾವನ್ನಪ್ಪಿದ್ದರು ಎಂದು ಬ್ರಿಟಿಷ್ ಸಾರಿಗೆ ಪೊಲೀಸರು ಹೇಳಿಕೊಂಡಿದ್ದಾರೆ.

Write A Comment