ರಾಷ್ಟ್ರೀಯ

ಕಾಶ್ಮೀರ: ಸಹಜ ಸ್ಥಿತಿಯತ್ತ ಜನಜೀವನ

Pinterest LinkedIn Tumblr

eqಶ್ರೀನಗರ (ಪಿಟಿಐ): ಪ್ರತಿಭಟನೆ, ಹಿಂಸಾಚಾರ, ನಿಷೇಧಾಜ್ಞೆಯಿಂದ ಐದು ದಿನಗಳಿಂದ ನಲುಗಿ ಹೋಗಿದ್ದ ಕಾಶ್ಮೀರ ಕಣಿವೆಯ ಜನಜೀವನ ಭಾನುವಾರ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ.
ಹಂದ್ವಾರಾ ಘಟನೆ ಹಾಗೂ ಬಳಿಕ ನಡೆದ ಪ್ರತಿಭಟನೆಯಿಂದ ತತ್ತರಿಸಿದ್ದ ಶ್ರೀನಗರ ಮತ್ತು ಕುಪ್ವಾರ ಜಿಲ್ಲೆಗಳು ನಿಧಾನವಾಗಿ ಚೇತರಿಸಿಕೊಳ್ಳುತ್ತಿವೆ. ಭಾನುವಾರ ಅಹಿತಕರ ಘಟನೆಗಳೇನೂ ವರದಿಯಾಗಿಲ್ಲ.
ಬಾರಾಮುಲ್ಲಾ ಮತ್ತು ಬನಿಹಲ್‌ ನಡುವೆ ರೈಲು ಸಂಚಾರ ಭಾನುವಾರ ಬೆಳಿಗ್ಗೆಯಿಂದ ಮತ್ತೆ ಆರಂಭವಾಗಿದೆ. ಈ ಮಾರ್ಗದಲ್ಲಿ ನಾಲ್ಕು ದಿನಗಳಿಂದ ಸಂಚಾರ ಸ್ಥಗಿತಗೊಂಡಿತ್ತು. ಶ್ರೀನಗರದಲ್ಲಿ ಹೇರಲಾಗಿದ್ದ ನಿಷೇಧಾಜ್ಞೆ ವಾಪಸ್‌ ಪಡೆಯಲಾಗಿದೆ.
ಶಾಲೆಯಿಂದ ಮನೆಗೆ ಮರಳುತ್ತಿದ್ದ 16ರ ಹರೆಯದ ವಿದ್ಯಾರ್ಥಿನಿಗೆ ಯೋಧನೊಬ್ಬನು ಕಿರುಕುಳ ನೀಡಿದ ಆರೋಪವು ಕಾಶ್ಮೀರದಲ್ಲಿ ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಗಿತ್ತು. ಲೈಂಗಿಕ ದೌರ್ಜನ್ಯ ಖಂಡಿಸಿ ಕಾಶ್ಮೀರದ ವಿವಿಧ ಭಾಗಗಳಲ್ಲಿ ನಡೆದ ಪ್ರತಿಭಟನೆ ವೇಳೆ ಐವರು ಬಲಿಯಾಗಿದ್ದರು.

Write A Comment