ಮನೋರಂಜನೆ

‘ಉಡ್ತಾ ಪಂಜಾಬ್‌’ನಲ್ಲಿ ಕೂಲಿ ಆಲಿಯಾ

Pinterest LinkedIn Tumblr

udta

ಅಭಿಷೇಕ್‌ ಚೌಬೆ ನಿರ್ದೇಶನದ ‘ಉಡ್ತಾ ಪಂಜಾಬ್‌’ ಚಿತ್ರದಲ್ಲಿ ಆಲಿಯಾ ಭಟ್‌ ವಲಸೆ ಕೂಲಿ ಕಾರ್ಮಿಕ ಪಾತ್ರ ನಿರ್ವಹಿಸುತ್ತಿದ್ದು, ಚಿತ್ರದಲ್ಲಿನ ತಮ್ಮ ಪಾತ್ರದ ಮೊದಲ ಫೋಟೊವನ್ನು ಆಲಿಯಾ ಶುಕ್ರವಾರ ಸಾಮಾಜಿಕ ತಾಣಗಳಿಗೆ ಹರಿಬಿಟ್ಟಿದ್ದಾರೆ.

ಟ್ವಿಟರ್‌ನಲ್ಲಿ ಈ ಚಿತ್ರಕ್ಕೆ 2 ಸಾವಿರಕ್ಕೂ ಹೆಚ್ಚು ಲೈಕ್‌ಗಳು ಸಿಕ್ಕಿವೆ. 700ಕ್ಕೂ ಹೆಚ್ಚು ಮಂದಿ ಈ ಚಿತ್ರವನ್ನು ರಿಟ್ವೀಟ್‌ ಮಾಡಿದ್ದಾರೆ.

ಇಸ್ಟಾಗ್ರಾಮ್‌ನಲ್ಲಿ ಆಲಿಯಾ ಚಿತ್ರಕ್ಕೆ 72 ಸಾವಿರಕ್ಕೂ ಹೆಚ್ಚು ಲೈಕ್‌ಗಳು ಸಿಕ್ಕಿವೆ. 600ಕ್ಕೂ ಹೆಚ್ಚು ಮಂದಿ ಈ ಚಿತ್ರಕ್ಕೆ ಕಮೆಂಟ್‌ ಮಾಡಿದ್ದಾರೆ.

ಶಾಹಿದ್‌ ಕಪೂರ್‌, ಕರೀನಾ ಕಪೂರ್‌ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ಆಲಿಯಾ ಭಟ್‌ ಅವರದ್ದು ಭಿನ್ನವಾದ ಪಾತ್ರ. ವಲಸೆ ಕೂಲಿ ಕಾರ್ಮಿಕ ಭವಣೆಗಳ ಮೇಲೆ ಚಿತ್ರದಲ್ಲಿ ಬೆಳಕು ಚೆಲ್ಲಲಾಗಿದೆಯಂತೆ. ಜೂನ್‌ 17ರಂದು ಚಿತ್ರ ತೆರೆಕಾಣಲಿದೆ.

Write A Comment