ರಾಷ್ಟ್ರೀಯ

ಪಾಕ್ ಪ್ರಧಾನಿ ನವಾಜ್ ಷರೀಫ್ ಮಾರಾಟಕ್ಕಿದ್ದಾರೆ !

Pinterest LinkedIn Tumblr

pakistan-pm-ebay.-webನವದೆಹಲಿ: ಪಾಕಿಸ್ತಾನದ ಪ್ರಧಾನ ಮಂತ್ರಿ ನವಾಜ್ ಷರೀಫ್ ಅಮೆರಿಕ ಮೂಲದ ಆನ್​ಲೈನ್ ಮಾರಾಟ ಮಳಿಗೆ ಇ-ಬೇನಲ್ಲಿ ಮಾರಾಟಕ್ಕಿದ್ದಾರೆ.

ಹೌದು, ಸದ್ಯ ಆರೋಗ್ಯದ ಸಮಸ್ಯೆಯಿಂದ ಲಂಡನ್​ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಷರೀಫ್​ಗೆ ಆನ್​ಲೈನ್ ಮಾರುಕಟ್ಟೆಯಲ್ಲಿ 66,200 ಫೌಂಡ್ (62.3ಲಕ್ಷ) ಹಣ ನಿಗದಿ ಮಾಡಲಾಗಿದೆ. ಅಷ್ಟೇ ಅಲ್ಲ ಷರೀಫ್ ಒಬ್ಬ ನಿರುಪಯೋಗಿ, ನಿಸ್ತೇಜ ಪ್ರಧಾನಿ ಎಂದು ವೆಬ್ ಪುಟದಲ್ಲಿ ಬರೆಯಲಾಗಿದೆ. ಈ ರೀತಿ ಪ್ರಧಾನಿಯನ್ನು ಮಾರಾಟಕ್ಕೆ ಇಡಲು ಮುಖ್ಯ ಕಾರಣ ಷರೀಫ್ ನಡೆಸಿದ ಭ್ರಷ್ಟಾಚಾರ.

ಕೆಲವು ದಿನಗಳ ಹಿಂದೆ ಬಹಿರಂಗವಾದ ‘ಪನಾಮಾ ಪತ್ರ’ಗಳಲ್ಲಿ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಕುಟುಂಬದ ಹೆಸರು ಹಾಗೂ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೊ ಹೆಸರು ಉಲ್ಲೇಖಗೊಂಡಿತ್ತು. ಬ್ರಿಟಿಷ್ ವರ್ಜಿನ್ ಐಲ್ಯಾಂಡ್ಸ್​ನಲ್ಲಿ ನವಾಜ್ ಷರೀಫ್​ರ ಇಬ್ಬರು ಪುತ್ರರು, ಪುತ್ರಿ ಕಂಪನಿ ಸ್ಥಾಪಿಸಿದ್ದು, ಈ ಕಂಪನಿ ಲಂಡನ್​ನಲ್ಲಿ ಕನಿಷ್ಠ ಆರು ಸ್ವತ್ತುಗಳನ್ನು ಹೊಂದಿದೆ. ಈ ಪೈಕಿ ಕೆಲವನ್ನು ಡಾಯ್ಚ ಬ್ಯಾಂಕ್​ಗೆ ಅಡವಿಟ್ಟು 66 ಕೊಟಿ ರೂ. ಪಡೆದಿರುವುದು ಬೆಳಕಿಗೆ ಬಂದಿತ್ತು.

ಈ ಕಾರಣಕ್ಕಾಗಿ ಪಾಕ್ ಪ್ರಧಾನಿಗೆ ಹಣ ನಿಗದಿಸಿ ಮಾರಾಟಕ್ಕಿಡಲಾಗಿದೆ. ವಿಶೇಷವೆಂದರೇ ಷರೀಫ್​ಗಾಗಿ ಈಗಾಗಲೇ ನೂರು ಜನರು ಬಿಡ್ ಮಾಡಿದ್ದಾರೆ.

Write A Comment