ರಾಷ್ಟ್ರೀಯ

ಅರಿಹಂತ್ ನಿಂದ ಕ್ಷಿಪಣಿ ಉಡಾವಣೆಯ ಯಶಸ್ವಿ ಪ್ರಯೋಗ

Pinterest LinkedIn Tumblr

missile_EPS-fiನವದೆಹಲಿ: ಅಣು ಶಸ್ತ್ರಾಸ್ತ್ರ ಕೊಂಡೊಯ್ಯಬಲ್ಲ ಕೆ-೪ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಭಾರತ ಅಣು ಸಬ್ ಮೆರಿನ್ ಅರಿಹಂತ್ ನಿಂದ ಯಶಸ್ವಿ ಪ್ರಯೋಗ ನಡೆಸಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಮೂಲಗಳ ಪ್ರಕಾರ ಬಂಗಾಲ ಕೊಲ್ಲಿಯ ಅರಿಹಂತ್ ನಿಂದ ಮಾರ್ಚ್ ೩೧ ರಂದು ಈ ಪ್ರಯೋಗ ನಡೆಸಲಾಗಿದೆ. ನೀರಿನಿಂದ ೨೦ ಮೀಟರ್ ಕೆಳಗಿನಿಂದ ಚಿಮ್ಮಿದ ಕ್ಷಿಪಣಿ, ಗುರಿ ಮುಟ್ಟುವುದಕ್ಕೂ ಮೊದಲು ೭೦೦ ಕಿ ಮೀ ಕ್ರಮಿಸಿದೆ ಎಂದು ತಿಳಿದುಬಂದಿದೆ.
ಇದಕ್ಕೂ ಮೊದಲು ಪಂಟೂನ್ ನಿಂದ ಮಾರ್ಚ್ ೭ ರಂದು ಡಮ್ಮಿ ಪರೀಕ್ಷೆ ನಡೆಸಲಾಗಿತ್ತು ಎಂದು ಕೂಡ ಮೂಲಗಳು ತಿಳಿಸಿವೆ.
ಈ ಕ್ಷಿಪಣಿಯನ್ನು ಡಿ ಆರ್ ಡಿ ಒ ಅಭಿವೃದ್ಧಿಪಡಿಸಿದೆ. ಆದರೆ ಈ ಪರೀಕ್ಷೆಯ ಬಗ್ಗೆ ಡಿ ಆರ್ ಡಿ ಒ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Write A Comment