ರಾಷ್ಟ್ರೀಯ

ಹೋರಿ ಹುಡುಕಿಕೊಟ್ಟವರಿಗೆ 50 ಸಾವಿರ ರೂ ಬಹುಮಾನ ಘೋಷಿಸಿದ ವಾರಣಾಸಿ ವ್ಯಕ್ತಿ

Pinterest LinkedIn Tumblr

Badashah

ವಾರಣಾಸಿ: ಕಳೆದುಹೋಗಿರುವ ‘ಬಾದಶಾಃ’ ಇರಬಹುದಾದ ಜಾಗದ ಸುಳಿವು ನೀಡಿದವರಿಗೆ, ಹುಡುಕಿಕೊಟ್ಟವರಿಗೆ 50000 ರೂ ಬಹುಮಾನ ನೀಡುವುದಾಗಿ ವಾರಣಾಸಿಯ ಸಾರನಾಥದೆಲ್ಲೆಡೆ ಭಿತ್ತಿಚಿತ್ರಗಳು ರಾರಾಜಿಸುತ್ತಿವೆ.

‘ಬಾದಶಾಃ’ ಯಾವುದೋ ಒಂದು ಪ್ರಾಣಿಯಲ್ಲ ಬದಲಾಗಿ ಕೆಲವು ದಿನಗಳಿಂದ ಕಾಣೆಯಾಗಿರುವ ಮೂರು ವರ್ಷದ ಸಾಕಿದ-ಪ್ರೀತಿಯ ಹೋರಿ! ಇದು ಪೋಲಿಸ್ ಠಾಣೆಯ ಮೆಟ್ಟಿಲು ಕೂಡ ಏರಿದ್ದು, ಮಾಲೀಕ ಮನೋಜ್ ಕುಮಾರ್ ಕಾಣೆಯಾದ ಹೋರಿಯ ಬಗೆಗೆ ಸಾರನಾಥ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಹೋರಿಯ ದೈಹಿಕ ಗುಣಗಳು, ಆಕಾರ, ಬಣ್ಣದ ವಿವರಗಳುಳ್ಳ ಪೋಸ್ಟರ್ ಗಳನ್ನು ಗ್ರಾಮದ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಾಕಲಾಗಿದೆ. ‘ಬಾದಶಾಃ’ ತಮ್ಮ ಕುಟುಂಬದ ಸದಸ್ಯನಾಗಿದ್ದು, ಅವನಿಗೆ ಮನೆಯಲ್ಲಿ ಸ್ವತಂತ್ರವಾಗಿ ಓಡಾಡುವ ಅವಕಾಶವಿತ್ತು ಎಂದು ಕೂಡ ಮನೋಜ್ ಹೇಳಿದ್ದಾರೆ.

“ಅದು ಯಾರಿಗೂ ತೊಂದರೆ ನೀಡದೆ ಈ ಪ್ರದೇಶದಲ್ಲೆಲ್ಲಾ ಸುತ್ತಾಡುತ್ತಿತ್ತು” ಎಂದು ಕೂಡ ಅವರು ತಿಳಿಸಿದ್ದಾರೆ.

Write A Comment