ಕನ್ನಡ ವಾರ್ತೆಗಳು

ಚಲಿಸುತ್ತಿದ್ದ ಬಸ್ಸಿನಲ್ಲಿ ಯುವತಿಗೆ ಚಾಲಕನಿಂದ ಲೈಂಗಿಕ ಕಿರುಕುಳ

Pinterest LinkedIn Tumblr

rape

ಬೆಂಗಳೂರು,ಎ,13: ಚಲಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ಯುವತಿಯೊಬ್ಬಳಿಗೆ ಬಸ್‌ನ ಚಾಲಕನೇ ಲೈಂಗಿಕ ಕಿರುಕುಳ ನೀಡಿದ ಕುರಿತು ಉಪ್ಪಾರ ಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಹಾವೇರಿಯಿಂದ ವಾಪಾಸಾಗುತ್ತಿದ್ದ ಬಸ್‌ನಲ್ಲಿ ರಾತ್ರಿ 1.30 ರ ವೇಳೆಗೆ ಚಾಲಕ ಕಿರುಕುಳ ನೀಡಿರುವ ಕುರಿತು ಯುವತಿ ದೂರಿದಲ್ಲಿ ಹೇಳಿಕೊಂಡಿದ್ದಾಳೆ.

ಬಸ್‌ನಲ್ಲಿ ಇಬ್ಬರು ಚಾಲಕರಿದ್ದು ಒಬ್ಟಾತ ನನ್ನ ಬಳಿ ವಿಕೃತವಾಗಿ ವರ್ತಿಸಿದ ಎಂದು ಹೇಳಿಕೊಂಡಿದ್ದಾಳೆ.

ಯುವತಿ ರೆಡ್‌ ಬಸ್‌ನಲ್ಲಿ ಟಿಕೆಟ್‌ ಬುಕ್‌ ಮಾಡಿ ಕೊಂಡಿದ್ದು ,ಚಾಲಕರ ಕುರಿತಾಗಿ ಮಾಹಿತಿ ನೀಡದ ಕುರಿತಾಗಿ ಆಕ್ರೋಶ ವ್ಯಕ್ತ ಪಡಿಸಿದ್ದಾಳೆ.

ಘಟನೆ ಎಪ್ರಿಲ್‌ 12 ರಂದು ನಡೆದಿದ್ದು ತಡವಾಗಿ ಇಂದು ಬೆಳಕಿಗೆ ಬಂದಿದೆ.

Write A Comment