ರಾಷ್ಟ್ರೀಯ

ಹತ್ಯೆಯಾದ ಎನ್ ಐ ಎ ಅಧಿಕಾರಿ ತನ್ಜಿಲ್ ಅಹ್ಮದ್ ಪತ್ನಿ ಆಸ್ಪತ್ರೆಯಲ್ಲಿ ವಿಧಿವಶ

Pinterest LinkedIn Tumblr

ahmed

ನವದೆಹಲಿ: ಹತ್ಯೆಯಾದ ಎನ್ ಐ ಎ ಅಧಿಕಾರಿ ತನ್ಜಿಲ್ ಅಹ್ಮದ್ ಅವರ ಪತ್ನಿ ಫರ್ಜಾನಾ ಖಟೂನ್, ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಇನ್ನು ಪತ್ತೆ ಹಚ್ಚಿದ ದಾಳಿಕೋರರು ಏಪ್ರಿಲ್ ೩ ರಂದು ಅಹ್ಮದ್ ಮೇಲೆ ಗುಂಡಿನ ದಾಳಿಗೈದಿದ್ದರು. ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಉತ್ತರ ಪ್ರದೇಶದ ಬಿಜ್ನೂರು ಜಿಲ್ಲೆಯಿಂದ ಮಧ್ಯರಾತ್ರಿ ಹಿಂದಿರುಗುವಾಗ ನಡೆದ ಈ ದಾಳಿಯಲ್ಲಿ ಅವರ ದೇಹದೊಳಗೆ ೨೧ ಗುಂಡುಗಳು ಹೊಕ್ಕಿದ್ದವು. ಫರ್ಜಾನ ಅವರ ದೇಹಕ್ಕೂ ನಾಲ್ಕು ಗುಂಡುಗಳು ಹೊಕ್ಕಿ ಗಾಯಗೊಂಡಿದ್ದರಿಂದ ಅವರನ್ನು ಎ ಐ ಐ ಎಂ ಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಎ ಐ ಐ ಎಂ ಎಸ್ ಆಸ್ಪತ್ರೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಫರ್ಜಾನ ಸುಮಾರು ಬೆಳಗ್ಗೆ ೧೦:೪೫ ಕ್ಕೆ ಕೊನೆಯುಸಿರೆಳೆದರು ಎಂದು ಎನ್ ಐ ಎ ಅಧಿಕಾರಿ ತಿಳಿಸಿದ್ದಾರೆ.

Write A Comment