ಮನೋರಂಜನೆ

ರಣ್ ಬೀರ್ ಕಪೂರ್ ಜೊತೆ ಮತ್ತೆ ಸ್ನೇಹ ಮುಂದುವರೆಸಲು ಮುಂದಾದ ಕತ್ರಿನಾ ಕೈಫ್ !

Pinterest LinkedIn Tumblr

Ranbir-Katrina

ಮುಂಬೈ: ಬಾಲಿವುಡ್ ನಟಿ ಕತ್ರಿನಾ ಕೈಫ್ ತಮ್ಮ ಹಳೆಯ ಬಾಯ್ ಫ್ರೆಂಡ್ ನಟ ರಣ್ ಬೀರ್ ಕಪೂರ್ ಜೊತೆಗಿನ ಸ್ನೇಹ ಸಂಬಂಧವನ್ನು ಮತ್ತೆ ಮುಂದುವರೆಸಲು ಮುಂದಾಗಿದ್ದಾರೆಯೇ..? ಇಂತಹುದೊಂದು ಗಾಸಿಪ್ ಬಾಲಿವುಡ್ ನಲ್ಲಿ ಹರಿದಾಡುತ್ತಿದ್ದು, ಇತ್ತೀಚೆಗೆ ನಡೆದ ಪಾರ್ಟಿವೊಂದರಲ್ಲಿ ಈ ಜೋಡಿ ಪರಸ್ಪರ ಭೇಟಿಯಾಗಿದ್ದರಂತೆ.

ಬಾಲಿವುಡ್ ನ ಭಾವಿ ಹಾಟ್ ಕಪಲ್ಸ್ ಎಂದೇ ಹೇಳಲಾಗುತ್ತಿದ್ದ ರಣ್ ಬೀರ್ ಕಪೂರ್ ಮತ್ತು ಕತ್ರೀನಾ ಕೈಫ್ ಜೋಡಿ ತಮ್ಮ ಬ್ರೇಕ್ ಅಪ್ ಮೂಲಕ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದರು. ಬ್ರೇಕ್ ಅಪ್ ಬಳಿಕ ಸಾಕಷ್ಟು ಅಂತರ ಕಾಯ್ದುಕೊಂಡಿದ್ದ ಈ ಜೋಡಿ ತಮ್ಮ ಸ್ನೇಹ ಸಂಬಂಧ ಕುರಿತಂತೆ ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಪ್ರಮುಖವಾಗಿ ನಟಿ ಕತ್ರೀನಾ ಕೈಫ್ ಮಾಧ್ಯಮಗಳು ಈ ವಿಚಾರ ಪ್ರಸ್ತಾಪಿಸಿದಾಗ ಬೇಕೆಂದೇ ವಿಷಯಾಂತರ ಮಾಡುತ್ತಿದ್ದರು.

ಆದರೀಗ ಬಾಲಿವುಡ್ ನಲ್ಲಿ ಹರಿದಾಡುತ್ತಿರುವ ಲೇಟೆಸ್ಟ್ ಗಾಸಿಪ್ ಪ್ರಕಾರ ಸ್ವತಃ ನಟಿ ಕತ್ರೀನಾ ಕೈಫ್ ಅವರೇ ಮತ್ತೆ ರಣ್ ಬೀರ್ ಜೊತೆಗಿನ ಸ್ನೇಹಸಂಬಂಧದ ಪ್ರಸ್ತಾಪ ಮಾಡಿದ್ದಾರಂತೆ. ಇತ್ತೀಚೆಗೆ ನಡೆದ ಪಾರ್ಟಿಯಲ್ಲಿ ಕ್ಯಾಟ್ ಹಾಗೂ ರಣ್ ಬೀರ್ ಒಟ್ಟಿಗೇ ಸೇರಿದ್ದರು. ಆ ಪಾರ್ಟಿಯಲ್ಲಿ ನಟಿ ಕತ್ರೀನಾ ರಣ್ ಬೀರ್ ಜೊತೆ ಮತ್ತೆ ತಮ್ಮ ಸ್ನೇಹ ಸಂಬಂಧವನ್ನು ಮುಂದುವರೆಸುವ ಪ್ರಸ್ತಾಪ ಮಾಡಿದ್ದರಂತೆ. ಆದರೆ ಕ್ಯಾಟ್ ಳ ಈ ಪ್ರಸ್ತಾಪವನ್ನು ರಣ್ ಬೀರ್ ಕಪೂರ್ ನಯವಾಗಿ ತಿರಸ್ಕರಿಸಿದ್ದು, ಇದರಿಂದ ನಟಿ ಕತ್ರೀನಾ ತೀವ್ರ ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನು ಇತ್ತೀಚೆಗಷ್ಟೇ ನಡೆದ ನಿರ್ಮಾಪಕಿ ಆರತಿ ಶೆಟ್ಟಿಯವರ ಬರ್ತಡೇ ಪಾರ್ಟಿಯಲ್ಲಿ ಕೂಡ ಕ್ಯಾಟ್ ಹಾಗೂ ರಣ್ ಬೀರ್ ಭಾಗಿಯಾಗಿದ್ದರೂ, ಪರಸ್ಪರ ಮಾತನಾಡುವುದಿರಲಿ ಕಣ್ಣೆತ್ತಿಯೂ ಕೂಡ ನೋಡದೇ ಹಾಗೆಯೇ ಮರಳಿದ್ದರಂತೆ. ಇದಲ್ಲದೇ ಜಗ್ಗುಬಾಸ್ ಚಿತ್ರದ ಚಿತ್ರೀಕರಣದ ವೇಳೆಯಲ್ಲಿಯೂ ಈ ಜೋಡಿ ಪರಸ್ಪರ ಮುನಿಸಿಕೊಂಡಿದ್ದರು ಎಂದು ಹೇಳಲಾಗುತ್ತಿದೆ.

ಅಜಬ್ ಪ್ರೇಮ್ ಕೀ ಗಜಬ್ ಕಹಾನಿ ಚಿತ್ರದ ಮೂಲಕ ಮೊದಲ ಬಾರಿಗೆ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದ ಈ ಜೋಡಿ ಬಳಿಕ ಡೇಟಿಂಗ್ ನಲ್ಲಿ ತೊಡಗಿತ್ತು.

Write A Comment