ಮನೋರಂಜನೆ

ದ್ರಾವಿಡ್ ಗೆ 1.3 ಕೋಟಿ ರು. ವೇತನ ನೀಡಿದ ಬಿಸಿಸಿಐ

Pinterest LinkedIn Tumblr

rahul-dravid

ನವದೆಹಲಿ: ಭಾರತ ಎ ಹಾಗೂ 19 ವಯೋಮಿತಿ ತಂಡದ ಕೋಚ್ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಗೆ ಬಿಸಿಸಿಐ ಒಪ್ಪಂದದ ಅರ್ಧ ಮೊತ್ತವಾಗಿ 1.30 ಕೋಟಿ ರುಪಾಯಿ ವೇತನ ಪಾವತಿಸಿದೆ.

ಜತೆಗೆ 2013-14ನೇ ಸಾಲಿನಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಸರ್ಕಾರಕ್ಕೆ 50 ಕೋಟಿ ರುಪಾಯಿ ಆದಾಯ ತೆರಿಗೆ ಪಾವತಿಸಿದೆ.

ಬಿಸಿಸಿಐ ತನ್ನ ಅಧಿಕೃತ ವೆಬ್ ಸೈಟ್ ನಿರ್ವಹಣೆಗಾಗಿ 25 ಲಕ್ಷ ರುಪಾಯಿ ವೆಚ್ ಮಾಡಿರುವುದಾಗಿ ತಿಳಿಸಿದೆ. ಇನ್ನು 2.74 ಕೋಟಿ ರುಪಾಯಿ ಸೇವಾ ತೆರಿಗೆ ಕಟ್ಟಿರುವುದಾಗಿ ವರದಿ ಬಿಡುಗಡೆ ಮಾಡಿದೆ.

Write A Comment