ರಾಷ್ಟ್ರೀಯ

ಪ್ರತ್ಯೇಕತಾವಾದಿಗಳ ವಿರುದ್ಧ ಹೋರಾಡುವುದಕ್ಕೆ ಪಿಡಿಪಿಯೊಂದಿಗೆ ಮೈತ್ರಿ ಸರ್ಕಾರ: ಅರುಣ್ ಜೇಟ್ಲಿ

Pinterest LinkedIn Tumblr

arun-jaitleyಜಮ್ಮು: ಜಮ್ಮು-ಕಾಶ್ಮೀರದಲ್ಲಿ ಪಿಡಿಪಿಯೊಂದಿಗೆ ಮೈತ್ರಿ ಸರ್ಕಾರ ರಚನೆ ಮಾಡಿರುವುದು ಕಾಶ್ಮೀರವನ್ನು ಪ್ರತ್ಯೇಕತಾವಾದಿಗಳಿಂದ ರಕ್ಷಿಸುವುದಕ್ಕಾಗಿ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ.
ಜಮ್ಮು-ಕಾಶ್ಮೀರದೊಂದಿಗೆ ಬಿಜೆಪಿ ಭಾವನಾತ್ಮಕ ಹಾಗೂ ಸೈದ್ಧಾಂತಿಕ ಸಂಬಂಧ ಹೊಂದಿದ್ದು, ಯಾವುದೇ ರೀತಿಯ ಪ್ರತ್ಯೇಕತವಾದದೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ. ಪ್ರತ್ಯೇಕತಾವಾದವನ್ನು ನಾವು ವಿರೋಧಿಸುತ್ತೇವೆ ಎಂದು ಜೆಟ್ಲಿ ಸ್ಪಷ್ಟಪಡಿಸಿದ್ದಾರೆ.
ಕಣಿವೆ ರಾಜ್ಯದಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ಹಾಗೂ ಬಹುತೇಜ ಜನರು ಪ್ರತ್ಯೇಕತಾವಾದದ ವಿರುದ್ಧ ನಮ್ಮ ಹೋರಾಟಕ್ಕೆ ನೆರವು ನೀಡಲು ಸಿದ್ಧರಿದ್ದಾರೆ. ಜಮ್ಮು-ಕಾಶ್ಮೀರದ ಮೈತ್ರಿಯನ್ನು ಪ್ರತ್ಯೇಕತಾವಾದದ ವಿರುದ್ಧದ ಹೋರಾಟಕ್ಕೆ ಬಳಸಿಕೊಳ್ಳಬೇಕು ಎಂಬುದು ಬಿಜೆಪಿ ಉದ್ದೇಶ, ಇದಕ್ಕೆ ಎಲ್ಲಾ ಪಕ್ಷಗಳು ನೆರವು ನೀಡಬೇಕೆಂದು ಜೇಟ್ಲಿ ಕರೆ ನೀಡಿದ್ದಾರೆ. ಪಿಡಿಪಿ-ಬಿಜೆಪಿ ಸೈದ್ಧಾಂತಿಕ ಭಿನ್ನಾಭಿಪ್ರಾಯ ಹೊಂದಿದೆ ಎಂದು ಎಲ್ಲರಿಗೂ ತಿಳಿದಿದೆ. ಪಿಡಿಪಿಯಲ್ಲಿರುವ ನಾಯಕರಿಗೂ ಈ ವಿಷಯ ಚೆನ್ನಾಗಿ ತಿಳಿದಿದೆ. ಆದರೆ ಕಾಶ್ಮೀರವನ್ನು ಪ್ರತ್ಯೇಕತಾವಾದಿಗಳಿಂದ ರಕ್ಷಿಸಬೇಕಾದರೆ ಮೈತ್ರಿಯ ಅಗತ್ಯವಿದೆ ಎಂದಿದ್ದಾರೆ ಜೇಟ್ಲಿ.

Write A Comment