ರಾಷ್ಟ್ರೀಯ

ರಾಮಮಂದಿರ ನಿರ್ಮಾಣ ಮಾಡುವ ಮೂಲಕ ಮೋದಿ ನೀಡಿದ್ದ ಭಾಷೆ ಉಳಿಸಿಕೊಳ್ಳುತ್ತಾರೆ: ವಿಹೆಚ್‌ಪಿ

Pinterest LinkedIn Tumblr

vhp=newನವದೆಹಲಿ: ತಾವು ನೀಡಿದ್ದ ವಾಗ್ದಾನದಂತೆ ಪ್ರಧಾನಿ ನರೇಂದ್ರ ಮೋದಿ ರಾಮ ಮಂದಿರ ನಿರ್ಮಾಣ ಮಾಡುತ್ತಾರೆ ಎಂದು ವಿಶ್ವ ಹಿಂದೂ ಪರಿಷತ್ ಭರವಸೆ ವ್ಯಕ್ತ ಪಡಿಸಿದೆ.
ಈ ಸಂಬಂಧ ಪಾರ್ಲಿಮೆಂಟ್‌ನಲ್ಲಿ ಕಾನೂನು ತರಲು ಸಮಯ ಕೂಡಿ ಬಂದಿದೆ ಎಂದು ಹೇಳಿದೆ. ರಾಮಮಂದಿರ ನಿರ್ಮಾಣದ ಬಗ್ಗೆ ನಾವು ತಲೆ ಕೆಡಿಸಿಕೊಂಡಿದ್ದೇವೆ. ಮಂದಿರ ನಿರ್ಮಾಣಕ್ಕೆ ಆಂದೋಲನವನ್ನು ಪ್ರಾರಂಭಿಸಿದಾಗಲೇ ಸಂಸತ್ತಿನಲ್ಲಿ ಕಾನೂನು ತರುವ ಮೂಲಕವೇ ಇದು ಸಾಧ್ಯ ಎಂಬುದನ್ನು ನಾವು ಸ್ಪಷ್ಟ ಪಡಿಸಿದ್ದೆವು. 1987ರಲ್ಲಿ ಪಲಮ್‌ಪುರ‌ನಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಕಾನೂನಿನ ಮೂಲಕವೇ ರಾಮಮಂದಿರ ನಿರ್ಮಾಣ ವಾಗಬೇಕು ಎಂಬ ನಿರ್ಣಯವನ್ನು ಪಾಸ್ ಮಾಡಿತ್ತು.
ತಾವು ಮಾಡಿದ್ದ ವಾಗ್ದಾನಕ್ಕೆ ಮೋದಿ ಬದ್ಧರಾಗಿರುತ್ತಾರೆ ಮತ್ತು ಸಂಸತ್ತಿನಲ್ಲಿ ಕಾನೂನು ಜಾರಿಗೆ ತರುವ ಮೂಲಕ ರಾಮಮಂದಿರ ನಿರ್ಮಾಣದ ಭರವಸೆಯನ್ನು ಈಡೇರಿಸುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದು ವಿಹೆಚ್‌ಪಿಯ ಅಂತರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷರಾದ ಪ್ರವೀಣ್ ತೊಗಾಡಿಯಾ ಹೇಳಿದ್ದಾರೆ.

Write A Comment