ರಾಷ್ಟ್ರೀಯ

ಈ ಬಾರಿ ಮುಂಗಾರು ಸಾಮಾನ್ಯಕ್ಕಿಂತ ಹೆಚ್ಚು, ಬರಪೀಡಿತ ಮರಾಠವಾಡಕ್ಕೆ ಉತ್ತಮ ಮಳೆ

Pinterest LinkedIn Tumblr

mansoonನವದೆಹಲಿ: ಬರದಿಂದ ತತ್ತರಿಸಿರುವ ದೇಶದ ಹಲವು ಭಾಗಗಳಿಗೆ ಇದೊಂದು ಸಿಹಿ ಸುದ್ದಿ. 2016ರ ಮುಂಗಾರು ಋತುವಿನಲ್ಲಿ ಸಾಮಾನ್ಯಕ್ಕಿಂತಲೂ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮಂಗಳವಾರ ತಿಳಿಸಿದೆ.
ತೀವ್ರ ಬರಗಾಲ ಹಾಗೂ ಜಲ ಕ್ಷಾಮ ಎದುರಿಸುತ್ತಿರುವ ಮರಾಠವಾಡಾ ಪ್ರಾಂತ್ಯದಲ್ಲಿ 2016ರ ಮುಂಗಾರು ಸಾಮಾನ್ಯಕ್ಕಿಂತಲೂ ಹೆಚ್ಚಿನ ಮಳೆಯನ್ನು ನೀಡಲಿದೆ ಎಂದು ಇಲಾಖೆ ವರದಿ ತಿಳಿಸಿದೆ.
ಇಂದು ದೆಹಲಿಯಲ್ಲಿ ನಡೆದ ಪಕ್ರಿಕಾಗೋಷ್ಠಿಯಲ್ಲಿ ಭಾರತೀಯ ಹವಾಮಾನ ಇಲಾಖೆಯ ಮಹಾ ನಿರ್ದೇಶಕ ಲಕ್ಷ್ಮಣ್‌ ಸಿಂಗ್‌ ಅವರು, 2016ರ ಮುಂಗಾರು ಋತುವಿನ ಅಂದಾಜು ವರದಿಯನ್ನು ಬಿಡುಗಡೆ ಮಾಡಿದರು.
ಈ ಬಾರಿ ಮುಂಗಾರು ಮಳೆ ಹೆಚ್ಚು ಕಡಿಮೆ, ಉತ್ತಮವಾಗಿರುವ ನಿರೀಕ್ಷೆ ಇದೆ ಎಂದವರು ಲಕ್ಷ್ಮಣ್‌ ಸಿಂಗ್‌ ಹೇಳಿದ್ದಾರೆ.
ದೀರ್ಘಾವಧಿ ಸರಾಸರಿಯ ಪ್ರಕಾರ ಈ ವರ್ಷದ ಮುಂಗಾರು ಶೇ.106ರಷ್ಟು ಉತ್ತಮವಿರುತ್ತದೆ. ಸಾಮಾನ್ಯದಿಂದ ಹೆಚ್ಚುವರಿಯ ತನಕ ಎಂಬಂತೆ ಈ ಬಾರಿಯ ಮುಂಗಾರು ಶೇ.94ರ ಸಂಭಾವ್ಯತೆಯನ್ನು ಹೊಂದಿದೆ. ಮಾತ್ರವಲ್ಲದೆ, ಈ ಬಾರಿಯ ಮುಂಗಾರು ಋತುವಿನಲ್ಲಿ ಮಳೆಯ ಬಹುತೇಕ ದೇಶಾದ್ಯಂತ ಸಮಾನ ಹಂಚಿಕೆಯನ್ನು ಕಾಣಲಿದೆ.

Write A Comment