ರಾಷ್ಟ್ರೀಯ

ಪ್ರಚಾರಕ್ಕೆ ನನ್ನ ಚಿತ್ರವನ್ನು ಬಳಸ ಬೇಡಿ: ಅನ್ಸಾರಿ

Pinterest LinkedIn Tumblr

gggggggಅಹಮದಾಬಾದ್‌ (ಏಜೆನ್ಸಿಸ್‌): ಪ್ರಚಾರಕ್ಕಾಗಿ ನನ್ನ ಚಿತ್ರವನ್ನು ಬಳಸಿಕೊಳ್ಳಬೇಡಿ ಎಂದು ಗುಜರಾತ್‌ ಗಲಭೆ ಸಂತ್ರಸ್ತ ಖುತುಬ್ದಿನ್‌ ಅನ್ಸಾರಿ ರಾಜಕೀಯ ಪಕ್ಷಗಳಲ್ಲಿ ಮನವಿ ಮಾಡಿದ್ದಾರೆ.
2002ರಲ್ಲಿ ಸಂಭವಿಸಿದ ಗುಜರಾತ್‌ ಗಲಭೆಯ ಸಂದರ್ಭದಲ್ಲಿ ಅನ್ಸಾರಿ ಅವರು ಕೈ ಮುಗಿದ್ದು ಪ್ರಾಣ ಬಿಕ್ಷೆ ಕೇಳುವ ಚಿತ್ರ ವಿಶ್ವದ ಗಮನ ಸೆಳೆದಿತ್ತು.
ಈ ಚಿತ್ರವನ್ನು ಕಾಂಗ್ರೆಸ್‌ ಸೇರಿದಂತೆ ಇತರ ರಾಜಕೀಯ ಪಕ್ಷಗಳು ಬಳಸಿಕೊಳ್ಳುತ್ತಿರುವುದು ನನಗೆ ಬೇಸರವಾಗಿದೆ. ನನ್ನ ಅನುಮತಿ ಇಲ್ಲದೆ ಚಿತ್ರವನ್ನು ಬಳಸಿಕೊಳ್ಳಲಾಗಿದೆ ಎಂದು ಅನ್ಸಾರಿ ದೂರಿದ್ದಾರೆ.
ಟೈಲರ್‌ ವೃತ್ತಿ ಮಾಡುತ್ತಿರುವ ಅನ್ಸಾರಿ ಅವರು ಮಾಧ್ಯಮಗಳಲ್ಲಿ ಪ್ರಕಟವಾಗುವ ಈ ಚಿತ್ರವನ್ನು ನೋಡಿದಾಗ ನನ್ನ ಮನಸ್ಸಿಗೆ ಬೇಸರವಾಗುತ್ತದೆ ಎಂದು ತಿಳಿಸಿದ್ದಾರೆ.
ಪ್ರಚಾರಕ್ಕಾಗಿ ಹಾಗೂ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಸಲುವಾಗಿ ಪಕ್ಷಗಳು ನನ್ನ ಚಿತ್ರವನ್ನು ಬಳಸಿಕೊಳ್ಳಬಾರದು ಎಂದು ಅವರು ಮನವಿ ಮಾಡಿದ್ದಾರೆ.

Write A Comment