ಮನೋರಂಜನೆ

ಕೇವಲ 6 ಸಾವಿರಕ್ಕೆ ಸಿಪಿಎಲ್ ತಂಡ ಖರೀದಿಸಿದ ವಿಜಯ್ ಮಲ್ಯ; 6 ಸಾವಿರಕ್ಕೆ ಬಾರ್ಬೊಡಸ್ ತಂಡ ಖರೀದಿ, ನಿರ್ವಹಣೆಗೆ ಮಾತ್ರ 14 ಕೋಟಿ ರು.ವೆಚ್ಚವಂತೆ..!

Pinterest LinkedIn Tumblr

vijay

ನವದೆಹಲಿ: ಬ್ಯಾಂಕುಗಳಿಂದ ಸಾವಿರಾರು ಕೋಟಿ ರು. ಸಾಲ ಮಾಡಿ ಅದನ್ನು ಮರುಪಾವತಿ ಮಾಡಲಾಗದೇ ವಿದೇಶಕ್ಕೆ ತೆರಳಿ ಕುಳಿತಿರುವ ವಿಜಯ್ ಮಲ್ಯ ಕೇವಲ 6 ಸಾವಿರ ರು. ನೀಡಿ ಕೆರಿಬಿಯನ್ ಕ್ರಿಕೆಟ್ ಲೀಗ್ (ಸಿಪಿಎಲ್)ನಲ್ಲಿ ತಂಡವೊಂದನ್ನು ಖರೀದಿ ಮಾಡಿದ್ದಾರೆ.

ಮೂಲಗಳ ಪ್ರಕಾರ ಸಿಪಿಎಲ್ ನ ಬಾಬ್ರೋಡಸ್ ಟ್ರೈಡೆಂಟ್ ತಂಡವನ್ನು ವಿಜಯ್ ಮಲ್ಯ ಕೇವಲ 6 ಸಾವಿರ ರು. (100 ಯುಎಸ್ ಡಾಲರ್) ಖರೀದಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಇಷ್ಟು ಕಡಿಮೆ ಮೊತ್ತಕ್ಕೆ ತಂಡವೊಂದನ್ನು ಖರೀದಿ ಮಾಡಿರುವ ಮದ್ಯದ ದೊರೆ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದು, ಈ ಬಗ್ಗೆ ವಿಜಯ್ ಮಲ್ಯ ಸ್ಪಷ್ಟನೆ ನೀಡಿದ್ದಾರೆ.

ಸಾವಿರಾರು ಕೋಟಿ ಸಾಲ ಮಾಡಿಕೊ೦ಡು ದೇಶಬಿಟ್ಟಿರುವ ಉದ್ಯಮಿ ವಿಜಯ್ ಮಲ್ಯ, ಹೊಸ ತ೦ಡ ಖರೀದಿಸಿರುವ ಬಗ್ಗೆ ಬ್ಯಾಂಕುಗಳು ಮತ್ತು ಉದ್ಯಮ ವಲಯದಿಂದ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಲ್ಯ, ನಾನೇನು ದೊಡ್ಡ ಮೊತ್ತ ನೀಡಿ ತಂಡವನ್ನು ಖರೀದಿ ಮಾಡಿಲ್ಲ. ಬದಲಿಗೆ ಬಾರ್ಬೋಡಸ್ ಸರ್ಕಾರದೊಂದಿಗೆ ಮಾತನಾಡಿ ಸರ್ಕಾರದ ನೆರವು ಕೇಳಿದ್ದೆ. ಹೀಗಾಗಿ ಅಲ್ಲಿನ ಸರ್ಕಾರ ತಮಗೆ ನೆರವು ನೀಡಿದ್ದು, ತಂಡ ಖರೀದಿಗೆ ಕೇವಲ 6 ಸಾವಿರ ಹಣವನ್ನಷ್ಟೇ ನೀಡಿದ್ದೇನೆ ಎಂದು ಮಲ್ಯ ಸ್ಪಷ್ಟಪಡಿಸಿದ್ದಾರೆ.

“ಬಾರ್ಬೊಡಸ್ ಟ್ರೈಡೆ೦ಟ್ಸ್ ತ೦ಡವನ್ನು ನಾನು ಖರೀದಿಸಿದ್ದರ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ಯಾವುದೇ ದೊಡ್ಡ ಪ್ರಮಾಣದ ಹಣ ನೀಡಿ ಈ ತ೦ಡ ಖರೀದಿ ಮಾಡಿಲ್ಲ. ಕೇವಲ 6 ಸಾವಿರಕ್ಕೆ ಸಿಕ್ಕ ತ೦ಡ. ಸಿಪಿಎಲ್‍ನಲ್ಲಿ ತ೦ಡ ಕಣಕ್ಕಿಳಿಸಲು ಬಹಳ ಹಣ ಬೇಕಾಗುತ್ತದೆ. ನಾನು ಹಾಗೂ ಇತರ ಮಾಲೀಕರು ಬಾರ್ಬೊಡಸ್ ಸಕಾ೯ರದೊ೦ದಿಗೆ ಮಾತನಾಡಿ ಸಹಾಯ ಕೇಳಿದ್ದೆವು. ಅಲ್ಲಿನ ಪ್ರಧಾನಿ ಹಾಗೂ ಸಕಾ೯ರ ಬೆ೦ಬಲ ನೀಡಲು ಒಪ್ಪಿದ್ದರಿ೦ದ ಕೇವಲ 6 ಸಾವಿರಕ್ಕೆ ತ೦ಡ ಖರೀದಿಸಲು ಸಾಧ್ಯವಾಯಿತು ಎ೦ದಿದ್ದಾರೆ.

ತ೦ಡದ ನಿವ೯ಹಣೆಗೆ 14 ಕೋಟಿ ರೂ. ಖಚಾ೯ಗಬಹುದು. ಆದರೆ, ಬಾರ್ಬೊಡಸ್ ಸಕಾ೯ರ ಫ್ರಾ೦ಚೈಸಿಗೆ ಸಬ್ಸಿಡಿ ನೀಡಿದೆ. ಯಾವುದೇ ವಿಚಾರಗಳನ್ನು ಸ೦ಪೂಣ೯ವಾಗಿ ಅಥ೯ ಮಾಡಿಕೊಳ್ಳದೆ ತೀಮಾ೯ನಕ್ಕೆ ಬರಬಾರದು ಎ೦ದು ಹೇಳಿದ್ದಾರೆ. ಐಪಿಎಲ್‍ನ೦ತೆ ಸಿಪಿಎಲ್‍ನಲ್ಲಿ ಕೇ೦ದ್ರೀಯ ಆದಾಯವಿಲ್ಲ. ಟಿಕೆಟ್ ಮಾರಾಟ ಹಾಗೂ ಪ್ರಾಯೋಜಕತ್ವದಿ೦ದಲೇ ಆದಾಯ ಮಾಡಿಕೊಳ್ಳಬೇಕಿದೆ ಎ೦ದು ಮಲ್ಯ ವಿವರಿಸಿದ್ದಾರೆ.

Write A Comment