ರಾಷ್ಟ್ರೀಯ

ಶಿರಡಿ ಸಾಯಿ ಬಾಬಾರನ್ನು ಪೂಜೆ ಮಾಡಿದ್ದಕ್ಕೆ ಮಹಾರಾಷ್ಟ್ರದಲ್ಲಿ ಬರ ಬಂತು: ಶಂಕರಾಚಾರ್ಯ

Pinterest LinkedIn Tumblr

Swaroopanand-Saraswati

ಹರಿದ್ವಾರ: ಪೂಜೆಗೆ ಅರ್ಹರಲ್ಲದ ಶಿರಡಿ ಸಾಯಿ ಬಾಬಾರನ್ನು ಪೂಜೆ ಮಾಡಿದ್ದಕ್ಕೆ ಮಹಾರಾಷ್ಟ್ರದಲ್ಲಿ ಬರ ಬಂತು ಎಂದು ದ್ವಾರಕಾ ಪೀಠದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಅವರು ಸೋಮವಾರ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಉದ್ಭವಿಸಿರುವ ಬರ ಸಮಸ್ಯೆ ಕುರಿತಂತೆ ಹರಿದ್ವಾರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿರುವ ಅವರು, ಸಾಯಿ ಬಾಬ ಓರ್ವ ಫಕೀರ. ಅವರನ್ನು ಪೂಜೆ ಮಾಡುವುದರೆ ಅದು ಅಮಂಗಳಕರವಾಗುತ್ತದೆ. ಮಹಾರಾಷ್ಟ್ರದಲ್ಲಿ ಇಂದು ಬರ ಬಂದಿರುವುದು ಸಾಯಿ ಬಾಬಾರನ್ನು ಪೂಜೆ ಮಾಡಿದ ಕಾರಣಕ್ಕೆ ಎಂದು ಹೇಳಿದ್ದಾರೆ.

ಈ ಹಿಂದಷ್ಟೇ ಸಾಯಿಬಾಬಾ ಆರಾಧನೆ ಕುರಿತಂತೆ ಮಾತನಾಡಿದ್ದ ಶಂಕರಾಚಾರ್ಯ ಅವರು, ಸಾಯಿ ಬಾಬಾ ಮನುಷ್ಯ. ಅವರು ದೇವರಲ್ಲ…ಅವರನ್ನು ನಂಬಬೇಡಿ. ಸಾಯಿಬಾಬಾಗೆ ದೇವಸ್ಥಾನ ನಿರ್ಮಿಸುವ ಅಗತ್ಯವಿಲ್ಲ. ವಿದೇಶಿ ಸಂಸ್ಥೆಗಳು ದುಡ್ಡು ಮಾಡುವುದಕ್ಕಾಗಿ ಇಂಥಾ ಪಿತೂರಿ ನಡೆಸುತ್ತಿವೆ. ಹಿಂದೂಗಳು ಒಗ್ಗಾಟ್ಟಾಗಿ ಇರುವುದು ಅವರಿಗೆ ಇಷ್ಟವಿಲ್ಲ. ಸಾಯಿಬಾಬಾ ಅವತಾರ ಪುರುಷನಲ್ಲ ಎಂದು ಹೇಳಿದ್ದರು.

Write A Comment