ಮನೋರಂಜನೆ

ನಾನು ಎಂಗೇಜ್ ಆಗಿಲ್ಲ, ಏಪ್ರಿಲ್ ಫೂಲ್ ಎಂದ ನಟಿ ಇಶಾ

Pinterest LinkedIn Tumblr

esha-gupta

ಇತ್ತೀಚೆಗಷ್ಟೇ ಇನ್‌ಸ್ಟಾಗ್ರಾಮ್ ನಲ್ಲಿ ಬೆರಳಿಗೆ ವಜ್ರದುಂಗುರ ಹಾಕಿಕೊಂಡು ನಾನು ಎಂಗೇಜ್ ಆಗಿದ್ದೇನೆ ಎಂದು ಹೇಳಿದ್ದಾ ನಟಿ ಇಶಾ ಗುಪ್ತಾ ಇದೀಗ ನಾನು ಎಂಗೇಜ್ ಆಗಿಲ್ಲ. ಎಲ್ಲಾ ಎಪ್ರಿಲ್ ಫೂಲ್ ಎಂದು ಸಂದೇಶ ರವಾನಿಸಿದ್ದಾಳೆ.

ಇಮ್ರಾನ್ ಹಶ್ಮಿ ಜತೆ ಜನ್ನತ್ 2 ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಇಶಾ ಗುಪ್ತಾ ತಾವು ಎಂಗೇಜ್ ಆಗಿರುವುದಾಗಿ ಹೇಳಿ ಎಲ್ಲಿರಿಗೂ ಶಾಕ್ ನೀಡಿದ್ದಳು. ಇಶಾ ಎಂಗೇಜ್ ಮೆಂಟ್ ಕುರಿತಂತೆ ಗುಸುಗುಸು ಶುರುವಾಗುತ್ತಿದ್ದಂತೆ ಇದೀಗ ಇಶಾ ನಾನು ಎಂಗೇಜ್ ಆಗಿಲ್ಲ ಎಂದು ಹೇಳಿದ್ದಾಳೆ.

ಚಿತ್ರರಂಗದಲ್ಲಿ ಸದ್ಯ ಇಶಾ ಗುಪ್ತಾಗೆ ಬೇಡಿಕೆ ಕಡಿಮೆಯಾಗಿವೆ. ಅಲ್ಲೊಂದು ಇಲ್ಲೊಂದು ಸಣ್ಣಪುಟ್ಟ ಪಾತ್ರಗಳಲ್ಲಿ ಅಭಿನಯಿಸುತ್ತಿರುವ ನಟಿಗೆ ಬೇರೆ ಕೆಲಸ ಇಲ್ಲದಂತಿದೆ. ಸದ್ಯ ರಂಗೂನ್ ಚಿತ್ರದಲ್ಲಿ ಐಟಂ ಡಾನ್ಸ್ ಮತ್ತು ರುಸ್ತುಮ್ ಚಿತ್ರದಲ್ಲಿ ನೆಗೆಟಿವ್ ಪಾತ್ರದಲ್ಲಿ ನಟಿಸುತ್ತಿದ್ದಾರೆ

Write A Comment